ಮಂಗಳೂರು: ಘನತ್ಯಾಜ್ಯ ವಿಲೇವಾರಿಯ ನೂತನ ವಾಹನಗಳಿಗೆ ಚಾಲನೆ

Update: 2016-09-02 06:46 GMT

ಮಂಗಳೂರು, ಸೆ.2: ಮಂಗಳೂರು ಮಹಾನಗರಪಾಲಿಕೆಯಿಂದ ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ನೂತನ 7 ಕಾಂಪಾಕ್ಟರ್, 30 ಹೈಲಿಫ್ಟ್ ವಾಹನಗಳನ್ನು ಮನಪಾ ಮೇಯರ್ ಎಂ. ಹರಿನಾಥ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿಯಲ್ಲಿ ಕರ್ನಾಟಕದಲ್ಲಿಯೆ ಮಂಗಳೂರು ಮಹಾನಗರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರು ಮಹಾನಗರ ರಾಜ್ಯದಲ್ಲಿಯೆ ಮೊದಲ ಸ್ಥಾನ ಪಡೆಯಲು ಜನರು ಕೂಡ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮೊಯ್ದೀನ್ ಬಾವ, ರಾಜ್ಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಸ ಸಂಗ್ರಹಣೆಯಲ್ಲಿ ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ಇದು ರಾಜ್ಯಕ್ಕೆ ಮಾದರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಉಪಮೇಯರ್ ಸುಮಿತ್ರಾ ಕರಿಯ, ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಲ್ಯಾನ್ಸಿಲಾಟ್ ಪಿಂಟೋ, ಎ.ಸಿ.ವಿನಯ ರಾಜ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸದಸ್ಯರಾದ ಅಪ್ಪಿಲತಾ, ಆಂಟನಿ ಸಂಸ್ಥೆಯ ಮುಖ್ಯಸ್ಥ ಟರ್ಜಿಂದರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಒಣ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವಾಹನಗಳು

ಇನ್ನು ಮುಂದೆ ಒಣ ತ್ಯಾಜ್ಯ ಸಂಗ್ರಹಕ್ಕೆ ವಾಹನಗಳು ಪ್ರತ್ಯೇಕವಾಗಿ ಬರಲಿದೆ. ಈಗ ಹೊಸತಾಗಿ ಬಂದಿರುವ ವಾಹನಗಳನ್ನು ಸೇರಿಸಿ 127  ವಾಹನಗಳು ತ್ಯಾಜ್ಯ ವಿಲೇವಾರಿಗೆ ಲಭ್ಯವಿದ್ದು, ಪ್ರತಿ ವಾರ್ಡ್ ನಲ್ಲಿ ಮನಪಾ ನಿಗದಿಪಡಿಸುವ ದಿನದಿಂದು ಒಣ ತ್ಯಾಜ್ಯ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. ಜನರು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಒಣ ತ್ಯಾಜ್ಯ ಸಂಗ್ರಹದ ವಾಹನ ಬಂದಾಗ ಅದನ್ನು ನೀಡಬೇಕಾಗಿದೆ. ಈ ಬಗ್ಗೆ ಮನಪಾ ಮುಂದಿನ ಸಭೆಯಲ್ಲಿ ನಿರ್ಧರಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News