ಜೈನರಲ್ಲಿ ಹೆಚ್ಚು ಪದವೀಧರರು, ಮುಸ್ಲಿಮರಲ್ಲಿ ಕಡಿಮೆ

Update: 2016-09-02 08:27 GMT

ಹೊಸದಿಲ್ಲಿ,ಸೆಪ್ಟಂಬರ್ 2: ಭಾರತದ ಮುಸ್ಲಿಮ್ ಸಮುದಾಯದಲ್ಲಿ ಪದವೀಧರರ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ವರದಿಯಾಗಿದೆ. ಜೈನ ಸಮುದಾಯ ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದಿದ್ದಾರೆ. ಜೈನರ ಜನಸಂಖ್ಯೆಯ ಶೇ.25ರಷ್ಟು ಅಥವಾ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಮಂದಿ ಒಂದೋಪದವೀಧರರು ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಾಗಿದ್ದಾರೆ. ಕ್ರೈಸ್ತರು ಟೆಕ್ನಿಕಲ್ ಡಿಪ್ಲೊಮಾಗಳಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಕ್ರೈಸ್ತ ಸಮುದಾಯ ಶೇ.22ರಷ್ಟು ಟೆಕ್ನಿಕಲ್ ಡಿಪ್ಲೊಮಾ ಪಡೆದವರನ್ನು ಹೊಂದಿದ್ದರೆ. ಶೇ.0.8ರಷ್ಟು ಸಿಕ್ಖರು ಟೆಕ್ನಿಕಲ್ ಡಿಪ್ಲೊಮಾ ಗಳಿಸಿದ್ದಾರೆ. ಪದವಿಧರರ ರಾಷ್ಟ್ರೀಯ ಸರಾಸರಿಯ ಅರ್ಧದಷ್ಟು ಮುಸ್ಲಿಮ್ ಪದವೀಧರರು ಇದ್ದಾರೆ. ಅದೇವೇಳೆ ಪದವೀಧರರ ರಾಷ್ಟ್ರೀಯ ಸರಾಸರಿ ಶೇ. 6 ಆಗಿದ್ದು, ಇದು 2011ರ ಸೆನ್ಸಸ್‌ನ ಅತ್ಯಂತ ಹೊಸ ಲೆಕ್ಕವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಶೇ. 6 ಪದವೀಧರರ ರಾಷ್ಟ್ರೀಯ ಸರಾಸರಿ ಆದರೆ ತಂತ್ರಜ್ಞಾನ ಶಿಕ್ಷಣದಲ್ಲಿ ರಾಷ್ಟ್ರೀಯ ಸರಾಸರಿ ಶೇ.0.6 ಆಗಿದೆ. ಅದೇವೇಳೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪದವೀಧರರ ಸರಾಸರಿ ಶೇ.30ರಿಂದ 50ರವರೆಗೆ ಇವೆ. ಅಷ್ಟು ಪ್ರಮಾಣದ ಪದವೀಧರರು ಅಭಿವೃದ್ಧಿಯಾದ ದೇಶಗಳಲ್ಲಿದ್ದಾರೆ. ಇನ್ನು 2001 ಮತ್ತು 2011ರ ಸೆನ್ಸಸ್ ಲೆಕ್ಕವನ್ನು ಪರಸ್ಪರ ಹೋಲಿಸಿ ನೋಡಿದಾಗ ಹತ್ತು ವರ್ಷಗಳ ಅವಧಿಯಲ್ಲಿ ಶೇ. 60ರಷ್ಟು ಮುಸ್ಲಿಮ್ ಸಮುದಾಯದ ಪದವೀಧರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಇದೇ ಅವಧಿಯಲ್ಲಿ ಹಿಂದೂಗಳಲ್ಲಿ ಶೇ.55ರಷ್ಟು ಮಾತ್ರ ಪದವೀಧರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಬೌದ್ಧಧರ್ಮೀಯರಲ್ಲಿ ಇದು ಶೇ.74ರಷ್ಟಿದೆ. ಈ ಅವಧಿಯಲ್ಲಿ ದೇಶದ ಒಟ್ಟು ಪದವೀಧರರ ಸಂಖ್ಯೆಯಲ್ಲಿ ಶೇ. 54ರಷ್ಟು ಹೆಚ್ಚಳವಾಗಿದೆ. ಟೆಕ್ನಿಕಲ್ ಡಿಪ್ಲೊಮಾದವರ ಸಂಖ್ಯೆಯಲ್ಲಿ ಮುಸ್ಲಿಂ ಶೇ.81ರಷ್ಟು ವತ್ತು ಬೌದ್ಧಧರ್ಮೀಯರಲ್ಲಿ ಶೇ.130ಷ್ಟು ಹೆಚ್ಚಳವಾಗಿದೆ. ಟೆಕ್ನಿಕಲ್ ಡಿಪ್ಲೊಮಾದ ಒಟ್ಟು ರಾಷ್ಟ್ರೀಯ ಸರಾಸರಿ ಶೇ.68 ಆಗಿದೆ.

ಆದರೆ ಇತರ ಸಮುದಾಯಗಳಿಗಿಂತ ಮುಸ್ಲಿಮರು ಮತ್ತು ಬೌದ್ಧಧರ್ಮೀಯರು ಶಿಕ್ಷಣದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. 2011ರ ಸೆನ್ಸಸ್‌ನ ಐದು ವರ್ಷದ ಬಳಿಕದ ಲೆಕ್ಕಗಳನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿ ಸೆನ್ಸಸ್ ಕಚೇರಿ ವ್ಯಸ್ತವಾಗಿದೆ. ಅನಕ್ಷರತೆ ಕಡಿಮೆಯಾಗಿದೆ, ಪ್ರಾಥಮಿಕ ಪ್ರೌಢ ಮಟ್ಟದಲ್ಲಿ ವಿದ್ಯಾಭ್ಯಾಸ ಸಾರ್ವತ್ರಿಕವಾಗಿದೆ. ಆದರೆ ಉನ್ನತ ಶಿಕ್ಷಣದಲ್ಲಿ ದುಃಸ್ಥಿತಿ ಮುಂದುವರಿಯುತ್ತಿದೆ. 1990ರಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಪ್ರವೇಶ ಲಭಿಸದಿರುವುದರಿಂದಾಗಿ ಈಗ ಉನ್ನತ ಶಿಕ್ಷಣ ರಂಗದಲ್ಲಿ ಹಿನ್ನಡೆಯಾಗಿದೆ ಎಂದು ಸೆನ್ಸಸ್ ವರದಿ ತಿಳಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News