×
Ad

" ಕಂಪೆನಿಗಳು ಪ್ರಧಾನಿಯ ಚಿತ್ರವನ್ನು ಜಾಹೀರಾತಿಗೆ ಬಳಸುವಂತಿಲ್ಲ, ಆದರೆ ತಮ್ಮ ಉದ್ಯೋಗಿಯ ಚಿತ್ರವನ್ನು ಬಳಸಬಹುದು ! "

Update: 2016-09-02 14:57 IST

ಹೊಸದಿಲ್ಲಿ, ಸೆ. 2 : ಶುಕ್ರವಾರ ದಿ ಟೈಮ್ಸ್ ಆಫ್ ಇಂಡಿಯಾ ಹಾಗು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳ ಮುಖಪುಟದ ರಿಲಯನ್ಸ್ ಜಿಯೋ ಜಾಕೆಟ್ ಜಾಹೀರಾತಿನಲ್ಲಿ ನೀಲಿ ಬಣ್ಣದ ಜಾಕೆಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓದುಗರತ್ತ ನೇರ ನೋಟ ಬೀರುವ  ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ಭಾರೀ ಚರ್ಚೆಗೆ ಕಾರಣವಾಗಿದೆ. 

ಮೇಲೆ “Dedicated to India and 1.2 billion Indians” ಎಂದು ಶೀರ್ಷಿಕೆ ನೀಡಲಾಗಿರುವ ಈ ಜಾಹೀರಾತಿನಲ್ಲಿ ಕೆಳಗೆ “In the journey of time, there come a few life changing moments. Our honourable Prime Minister’s inspiring vision of a Digital India is one such movement. Jio is dedicated to realising our Prime Minister’s Digital India vision for 1.2 billion Indians. Jio Digital Life will give the power of data to each Indian, to fulfill every dream and collectively take India to the global digital leadership…” ಎಂಬ ಸಂದೇಶ ನೀಡಲಾಗಿದೆ. 

ಗುರುವಾರ ಮುಂಬೈ ಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಮ್ಮ ಹೊಸ ಮಹತ್ವಾಕಾಂಕ್ಷಿ ಯೋಜನೆಯನ್ನು ಅನಾವರಣಗೊಳಿಸಿದ ಮರುದಿನ ಈ ಜಾಹೀರಾತು ಪ್ರಕಟವಾಗಿದೆ. ಆದರೆ ಖಾಸಗಿ ಕಂಪೆನಿಯೊಂದರ ಜಾಹೀರಾತಿನಲ್ಲಿ ರೂಪದರ್ಶಿಯಂತೆ ಸ್ವತಃ ಪ್ರಧಾನಿಯವರ ಚಿತ್ರವನ್ನು ಬಳಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.  

ಜಗತ್ತಿನಲ್ಲೇ ಅತ್ಯಂತ ಕಡಿಮೆ ಡಾಟಾ ದರ ಹಾಗು  ಧ್ವನಿ ಕರೆ ಹಾಗು ರೋಮಿಂಗ್ ಸಂಪೂರ್ಣ ಉಚಿತವಾಗಿರುವ ಈ ಹೊಸ ಸೇವೆಗೆ ಪ್ರಧಾನಿ ಚಿತ್ರವನ್ನು ಬಳಸಿರುವುದು ಆಕ್ರೋಶ, ಅಸಮಾಧಾನ, ವ್ಯಂಗ್ಯ, ಟೀಕೆಗಳಿಗೆ ಕಾರಣವಾಗಿದೆ. 

ಕೆಲವರು ಇದು ಕಾನೂನು ಬಾಹಿರ ಎಂದು ವಾದಿಸಿದ್ದರೆ, ಇನ್ನು ಕೆಲವರು ಇದು ಮೋದಿ ಹಾಗು ಅಂಬಾನಿ ಒಂದೇ ಎಂಬುದರ ಪುರಾವೆ ಎಂದಿದ್ದಾರೆ. ದೇಶಾದ್ಯಂತ ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರುದ್ಧ ಮುಷ್ಕರ ನಡೆಯುತ್ತಿರುವ ದಿನವೇ ದೇಶದ ಅತಿ ದೊಡ್ಡ ಬಂಡವಾಳಶಾಹಿಯ ಜಾಹೀರಾತಿನಲ್ಲಿ ಪ್ರಧಾನಿಯ ಚಿತ್ರ ಪ್ರಕಟವಾಗಿರುವುದು ಗಮನಾರ್ಹವಾಗಿದೆ. 

ಇದಕ್ಕೆ ಬಂದಿರುವ ಕೆಲವು ಪ್ರತಿಕ್ರಿಯೆಗಳನ್ನು ನೋಡಿ :  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News