ಗ್ಯಾಸ್ ಕಟರ್‌ನಿಂದ ಎಟಿಎಂ ಒಡೆದ ಕಳ್ಳರು !
ಫರೀದಾಬಾದ್,ಸೆಪ್ಟಂಬರ್ 2: ನಿನ್ನೆ ರಾತ್ರೆ ಬಲ್ಲಭಗಡ್ ನಗರದಲ್ಲಿ ಎಸ್‌ಬಿಐನ ಎಟಿಎಂ ಗ್ಯಾಸ್‌ಕಟ್ಟರ್‌ನಿಂದ ಕತ್ತರಿಸಲುಪ್ರಯತ್ನಿಸಿದ ಪರಿಣಾಮ 18, ಲಕ್ಷ 13000ರೂಪಾಯಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಲ್ಲಬ್‌ನಗರ್ ಹರ್ಯಾಣದ ಫರೀದಾಬಾದ್ ಸಮೀಪದ ನಗರವಾಗಿದ್ದು ಎಟಿಎಂಗೆ ಬೆಂಕಿಹಿಡಿದಿದ್ದರಿಂದ ಕಳ್ಳತನ ವಿಫಲವಾಗಿದೆ. ಎಟಿಎಂಗೆ ಬೆಂಕಿಬಿದ್ದಿದೆ ಎಂದು ಮೊದಲು ಎಟಿಎಂಗೆ ಹತ್ತಿರವಿದ್ದ ಮನೆಯವರಿಗೆ ಅರಿವಾಗಿತ್ತು. ಎಕ್ಸಿಟ್ ವಿಂಡೋದ ಮೂಲಕ ಹೊಗೆ ಮನೆಯೊಳಗೆ ಬರತೊಡಗಿದಾಗ ಈ ಮನೆಯವರು ಹೊರಗೆ ಬಂದಿದ್ದರು. ಎಟಿಎಂನಲ್ಲಿ ಬೆಂಕಿ ಉರಿಯುತ್ತಿರುವುದು ಅರಿವಾದ ಕೂಡಲೇ ಪೊಲೀಸರಿಗೆ ಕರೆಮಾಡಿದ್ದರು.
ಎಟಿಎಂ ಸೆಕ್ಯುರಿಟಿ ಗಾರ್ಡ್ ರಾತ್ರಿ ಹತ್ತುಗಂಟೆಗೆ ಎಟಿಎಂಗೆ ಎಂದಿನಂತೆ ಬೀಗಹಾಕಿ ಮನೆಗೆಹೋಗಿದ್ದ. ಆತ ಮರುದಿವಸ ಬೆಳಗ್ಗೆ ಆರುಗಂಟೆಗೆ ಎಂದಿನಂತೆ ಎಟಿಎಂ ತೆರೆಯಲು ಬಂದಾಗ ಅದು ಸುಟ್ಟುಬೂದಿಯಾಗಿರುವುದು ಕಂಡು ಬಂದಿತ್ತು. ಎಟಿಎಂಗೆ ಹಾಕಿದ್ದ ಬೀಗವನ್ನು ಒಡೆಯಲಾಗಿತ್ತು. ಆತ ತನ್ನ ಮೇಲಧಿಕಾರಿಗಳಿಗೆ ಕೂಡಲೇ ಸುದ್ದಿಮುಟ್ಟಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಬ್ಯಾಂಕ್ ಅಧಿಕಾರಿ ಗೋವಿಂದ್ ಸಿಂಗ್ ಎಂಬವರು ಎಟಿಎಂನಲ್ಲಿ ಹದಿನೆಂಟು ಲಕ್ಷದ ಹದಿಮೂರು ಸಾವಿರ ರೂಪಾಯಿ ಇತ್ತು ಹಾಗೂ ಅವೆಲ್ಲವೂ ಸುಟ್ಟುಭಸ್ಮವಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.