ಕುಟುಕು ಕಾರ್ಯಾಚರಣೆಗೆ ಆಪ್ ಸಚಿವ ‘ ಬಲಿ ’ ಬಳಿಕ ಕಾಂಗ್ರೆಸ್ ನಲ್ಲೂ ತಳಮಳ
ಚಂಡಿಗಡ,ಆಗಸ್ಟ್ 2: ಆಮ್‌ಆದ್ಮಿ ಪಾರ್ಟಿಯ ನಾಯಕರ ಸ್ಟಿಂಗ್ ಆಪರೇಶನ್ ಸಿಡಿಗಳು ಒಂದರನಂತರ ಒಂದರಂತೆ ಬಹಿರಂಗಗೊಳ್ಳುತ್ತಿರುವುದನ್ನು ನೋಡಿ ಕಾಂಗ್ರೆಸ್‌ನೊಳಗೂ ಕಂಪನೆ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ. ಗುರುವಾರ ಕ್ಯಾಪ್ಟನ್ ಅಮರೀಂದರ್ ಸಿಂಗ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ಗಾಬರಿವ್ಯಕ್ತವಾಗಿದೆ ಎನ್ನಲಾಗಿದೆ. ಕಪೂರ್ತಲಾದ ಶಾಸಕ ರಾಣಾ ಗುರ್ಜಿತ್‌ರು ತಮ್ಮ ಶಾಸಕರಿಗೆ ಫೋನ್ ಕುರಿತು ಎಚ್ಚರಿಕೆಯಿಂದಿರಲು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ಫೋನ್‌ನಲ್ಲಿ ಯಾವುದೇ ವಿಷಯಕ್ಕೂ ಸಂಬಂಧಿಸಿ ಹಣಕಾಸು ವ್ಯವಹಾರ ಮಾತಾಡಬೇಡಿ, ಸರಕಾರ ಮತ್ತು ಆಮ್‌ಆದ್ಮಿಪಾರ್ಟಿ ಸಿಕ್ಕಿಸಿಹಾಕಲು ಸ್ಟಿಂಗ್ ಮಾಡಿಸಬಹುದಾಗಿದೆ. ಕೆಲವು ಜನರು ಹೈಕಮಾಂಡ್‌ನಿಂದ ಟಿಕೆಟ್ ಕೊಡಿಸುವ ಭರವಸೆ ಕೊಟ್ಟು ಹಣಕ್ಕೆ ಬೇಡಿಕೆಇಡುತ್ತಿದ್ದಾರೆ. ನಾವು ಇಂತಹ ಒಬ್ಬ ವ್ಯಕ್ತಿಯನ್ನು ಫತೇಪುರ ಸಾಹಿಬ್‌ನಲ್ಲಿ ಹಿಡಿದಿದ್ದೆವು ಎಂದು ಶಾಸಕ ಕುಲ್ಜೀತ್ ನಾಗರಾ ಹೇಳಿದ್ದಾರೆ. ನಂತರ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಮತ್ತು ಲಾಲ್‌ಸಿಂಗ್‌ರು ಇಂತಹ ಸ್ಟಿಂಗ್‌ಗಳನ್ನು ಪಂಜಾಬ್ ಸರಕಾರ ಕೂಡಾ ಮಾಡಿಸಬಹುದು ಆದ್ದರಿಂದ ಕಾಂಗ್ರೆಸ್ ಶಾಸಕರು ತುಂಬ ಎಚ್ಚರವಹಿಸಬೇಕೆಂದು ಅವರಿಬ್ಬರೂ ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.