ಮುಷ್ಕರದಿಂದ 18,000 ಕೋ.ರೂ ನಷ್ಟ

Update: 2016-09-02 15:23 GMT

ಲಕ್ನೋ,ಸೆ.2: ಕೇಂದ್ರ ಕಾರ್ಮಿಕ ಒಕ್ಕೂಟಗಳು ಕರೆ ನೀಡಿದ್ದ ಶುಕ್ರವಾರದ ಬಂದ್ ವ್ಯಾಪಾರ,ಸಾರಿಗೆ,ಪ್ರಮುಖ ತಯಾರಿಕಾ ಘಟಕಗಳು ಮತ್ತು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, 16,000 ಕೋ.ರೂ.ನಿಂದ 18,000 ಕೋ.ರೂ.ನಷ್ಟ ಸಂಭವಿಸಿರಬಹುದೆಂದು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ಒಕ್ಕೂಟ ಅಸೋಚಾಮ್ ಅಂದಾಜಿಸಿದೆ.

ಭಾರತವು ತಯಾರಿಕೆ ಕ್ಷೇತ್ರ ಮತ್ತು ಸೇವೆಗಳಂತಹ ಇತರ ಪ್ರಮುಖ ಕ್ಷೇತ್ರಗಳನ್ನು ಉತ್ತೇಜಿಸುವ ಮೂಲಕ ತನ್ನ ಜಿಡಿಪಿಯನ್ನು ಹೆಚ್ಚಿಸಬೇಕಾದ ಅಗತ್ಯವಿರುವುದರಿಂದ ಮುಷ್ಕರಗಳು ಮತ್ತು ಬಂದ್‌ಗಳು ದೇಶದ ಪ್ರಗತಿಗೆ ಪೂರಕವಲ್ಲ ಎಂದು ಅದು ಹೇಳಿದೆ.

ದೇಶದ ಜಿಡಿಪಿಯಲ್ಲಿ ವ್ಯಾಪಾರ,ಸಾರಿಗೆ ಮತ್ತು ಹೋಟೆಲ್‌ಗಳು ಪ್ರಮುಖ ಭಾಗವಾಗಿವೆ. ಬ್ಯಾಂಕಿಂಗ್ ಸೇರಿದಂತೆ ಸಮಗ್ರ ಹಣಕಾಸು ಸೇವೆಗಳು ಜಿಡಿಪಿಯ ಮತ್ತೊಂದು ಪ್ರಮುಖ ಘಟಕವಾಗಿವೆ. ಮುಷ್ಕರದಿಂದಾಗಿ ಇವೆರಡು ಪ್ರಮುಖ ವಿಭಾಗಗಳು ಕುಂಠಿತಗೊಂಡಿವೆ ಎಂದು ಅಸೋಚಾಮ್‌ನ ಮಹಾ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News