ಬಂದ್‌ನಲ್ಲಿ ಪರದಾಡುವವರ ಪಾಲಿನ ಆಪದ್ಭಾಂಧವ ಸತ್ತಾರ್ ಮಿಸ್ರಿ
Update: 2016-09-02 21:54 IST
ಕಾಸರಗೋಡು, ಸೆ.2:ಯಾವುದೇ ಮುಷ್ಕರ, ಹರಾತಳ, ಬಂದ್ ನಡೆಯವ ಸಂದರ್ಭ ಪ್ರಯಾಣಿಸಲು ವಾಹನ ಇಲ್ಲದೆ ಪರದಾಡುವ ಪ್ರಯಾಣಿಕರಿಗೆ ಆಪದ್ಭಾಂಧವರಾಗಿದ್ದಾರೆ ಕಾಸರಗೋಡು ತಳಂಗರೆಯ ನಿವಾಸಿ ಸತ್ತಾರ್ ಮಿಸ್ರಿ.
ಕಳೆದ ಎಂಟು ವರ್ಷಗಳಿಂದ ಹಗಲು, ರಾತ್ರಿಯೆನ್ನದೆ ಕಾಸರಗೋಡು ಬಸ್ ನಿಲ್ದಾಣದಲ್ಲಿ ಇವರು ನೀಡುತ್ತಿರುವ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಂದ್ ಸಂದರ್ಭದಲ್ಲಿ ಕಾಸರಗೋಡು ಬಸ್ ನಿಲ್ದಾಣಕ್ಕೆ ಬಂದು, ಪ್ರಯಾಣಿಸಲು ವಾಹನಗಳು ಸಿಗದೆ ಪರದಾಡುವ ಪ್ರಯಾಣಿಕರನ್ನು ತಮ್ಮ ಸ್ಕೂಟರ್ ನಲ್ಲಿ ಉಚಿತವಾಗಿ ಮನೆಗೆ ತಲುಪಿಸುತ್ತಾರೆ. ಆದರೆ, ಯಾವುದೇ ಪ್ರತಿಫಲವನ್ನು ಇವರು ಪಡೆಯುವುದಿಲ್ಲ.
ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಮಾತ್ರವಲ್ಲದೆ, ನಗರದಲ್ಲಿ ವಾಹನಗಳಿಲ್ಲದೆ ಪರದಾಡುವವರನ್ನು ಇವರು ಉಚಿತವಾಗಿ ತಮ್ಮ ವಾಹನದಲ್ಲಿ ಕರೆದೊಯ್ಯುತ್ತಾರೆ.
ಯಾವುದೇ ಪ್ರತಿಫಲ ಬಯಸದೆ ಸದಾ ನಗುಮುಖದ ಸೇವೆಯನ್ನು ನೀಡುತ್ತಿರುವ ಸತ್ತಾರ್ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.