ಅಮೆರಿಕದಲ್ಲಿ ಜೊತೆಯಾಗಿ ಯುದ್ಧಾಭ್ಯಾಸ ನಡೆಸಿದ ಇಸ್ರೇಲ್, ಪಾಕ್, ಯುಎಇ

Update: 2016-09-02 17:08 GMT

ಜೆರುಸಲೇಂ, ಸೆ. 2: ಇಸ್ರೇಲ್ ವಾಯು ಪಡೆಯ ಪೈಲಟ್‌ಗಳು ಕಳೆದ ತಿಂಗಳು ಅಮೆರಿಕದಲ್ಲಿ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಯುದ್ಧ ವಿಮಾನಗಳ ಪೈಲಟ್‌ಗಳೊಂದಿಗೆ ಜಂಟಿ ಸೇನಾ ಅಭ್ಯಾಸ ನಡೆಸಿದ್ದಾರೆ.
ಆದಾಗ್ಯೂ, ಈ ಎರಡೂ ದೇಶಗಳು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ.
ಇತ್ತೀಚೆಗೆ ಮುಕ್ತಾಯಗೊಂಡ ‘ರೆಡ್ ಫ್ಲಾಗ್’ ಸುಧಾರಿತ ಯುದ್ಧ ತರಬೇತಿ ಅಭ್ಯಾಸದಲ್ಲಿ ಹಲವಾರು ದೇಶಗಳು ಪಾಲ್ಗೊಂಡಿವೆ ಎಂದು ಅಮೆರಿಕದ ವಾಯು ಪಡೆ ತಿಳಿಸಿದೆ.
ನೂತನ ತಂತ್ರಗಾರಿಕೆ ಮತ್ತು ತಂತ್ರಜ್ಞಾನವನ್ನು ಪರೀಕ್ಷಿಸುವುದಕ್ಕಾಗಿ ಅಮೆರಿಕವು ತನ್ನ ಮಿತ್ರ ದೇಶಗಳೊಂದಿಗೆ ನಿಯಮಿತವಾಗಿ ಯುದ್ಧಾಭ್ಯಾಸಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News