×
Ad

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ 20ನೆ ವಾರ್ಷಿಕೋತ್ಸವದಂಗವಾಗಿ ವಿವಿಧ ಕಾರ್ಯಕ್ರಮಗಳು

Update: 2016-09-02 23:00 IST

ಮಂಗಳೂರು, ಸೆ. 2: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿಕೆಎಸ್‌ಸಿ)ನ 20ನೆ ವಾರ್ಷಿಕೋತ್ಸವದ ಅಂಗವಾಗಿ ಸೆ. 22ರಂದು ಮಧ್ಯಾಹ್ನ 2 ಗಂಟೆಗೆ ನಗರದ ಟೌನ್‌ಹಾಲ್‌ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ20 ಹೊಲಿಗೆ ಯಂತ್ರಗಳ ಉಚಿತ ವಿತರಣೆ, 5 ತಳ್ಳುವ ಗಾಡಿಗಳ ಉಚಿತ ವಿತರಣೆ, ಒಂದೇ ಮಸೀದಿಯಲ್ಲಿ ಕನಿಷ್ಠ 20 ವರ್ಷಗಳಿಂದ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ 20 ಮಂದಿ ಮುದರ್ರಿಸ್/ಖತೀಬ್/ಸದರ್/ಮುಅಲ್ಲಿಂ/ಮುಅಝ್ಝಿನ್‌ರವರಿಗೆ ಸನ್ಮಾನ, ಕನಿಷ್ಠ 20 ವರ್ಷಗಳಿಂದ ಸೇವೆಗೈಯುತ್ತಿರುವ 20 ಮುಸ್ಲಿಂ ಧಾರ್ಮಿಕ/ಲೌಕಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ, ತಲಾ ಓರ್ವ ಮುಸ್ಲಿಂ, ಹಿಂದೂ ಮತ್ತು ಕ್ರೈಸ್ತ ಸಹೋದರರಿಗೆ ಸದ್ಭಾವನಾ ಪ್ರಶಸ್ತಿ (ಶಾಂತಿ ಮತ್ತು ಸೌಹಾರ್ದತೆಗಾಗಿ ಸೇವೆ ಸಲ್ಲಿಸಿದವರಿಗೆ) ಸಂಸ್ಥೆಯ ಈ ಯೋಜನೆಗಳಿಗೆ ಆರ್ಥಿಕವಾಗಿ ಹಿಂದುಳಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.13 ಆಗಿದೆ. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ಮೌಲವಿಗಳು ಅರ್ಜಿಯೊಂದಿಗೆ ಸಂಬಂಧಿತ ಮಸೀದಿ, ಮದ್ರಸದಿಂದ 20 ವರ್ಷಗಳ ಸೇವಾ ದೃಢೀಕರಣ ಪತ್ರವನ್ನು ಲಗತ್ತಿಸತಕ್ಕದ್ದು.

20 ಜೋಡಿಗೆ ಸಾಮೂಹಿಕ ವಿವಾಹ

ಕಾರ್ಯಕ್ರಮದ ಅಂಗವಾಗಿ 20 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಅರ್ಜಿ ಫಾರ್ಮ್‌ನ್ನು ಈಗಾಗಲೇ ಮಸೀದಿಗಳಿಗೆ ಕಳುಹಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ಸೆ.30 ಆಗಿದೆ. ಮದುವೆ ಅರ್ಜಿ ಫಾರಂ ಪಡೆಯಲು ಹಾಗೂ ಎಲ್ಲಾ ಅರ್ಜಿ ಸಲ್ಲಿಸಲು ಕಚೇರಿ ವಿಳಾಸ ದ.ಕ. ಸುನ್ನೀ ಸೆಂಟರ್, ಮಂಗಳೂರು ಮರ್ಕಝುತಅಲೀಮುಲ್ ಇಹ್ಸಾನ್, ಪಾವೂರು ಕಾಂಪ್ಲೆಕ್ಸ್, ಎರಡನೇ ಮಹಡಿ, ನೆಲ್ಲಿಕಾಯಿ ರಸ್ತೆ, ಬಂದರ್ ಮಂಗಳೂರು-1. ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9740186007, 9611228345, 9845413529, 9741503662ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News