×
Ad

ಮುಷ್ಕರ ನಿರತ ನರ್ಸ್‌ಗಳ ವಿರುದ್ಧ ಎಸ್ಮಾ ಹೇರಲು ದಿಲ್ಲಿ ಸರಕಾರ ನಿರ್ಧಾರ

Update: 2016-09-02 23:14 IST

ಹೊಸದಿಲ್ಲಿ,ಸೆ.2: ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿಲ್ಲಿಯ ಸರಕಾರಿ ಆಸ್ಪತ್ರೆಗಳ ನರ್ಸ್‌ಗಳು ನಡೆಸುತ್ತಿರುವ ಮುಷ್ಕರವು ಕಾನೂನುಬಾಹಿರವೆಂದು ದಿಲ್ಲಿ ಸರಕಾರವು ಶುಕ್ರವಾರ ಘೋಷಿಸಿದ್ದು ಅವರ ವಿರುದ್ಧ ಎಸ್ಮಾ ಕಾಯ್ದೆ ಹೇರುವುದಾಗಿ ತಿಳಿಸಿದೆ. ಈಗಾಗಲೇ ಡೆಂಗ್ ಹಾಗೂ ಚಿಕುನ್‌ಗುನ್ಯ ಸೋಂಕುರೋಗ ಪ್ರಕರಣಗಳ ಉಲ್ಬಣದಿಂದ ತತ್ತರಿಸಿರುವ ದಿಲ್ಲಿಯಲ್ಲಿ ನರ್ಸ್‌ಗಳ ಮುಷ್ಕರದಿಂದಾಗಿ ಅಲ್ಲಿನ ಸರಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆ ಅಸ್ತವ್ಯಸ್ತಗೊಂಡಿದೆ.

ಮುಷ್ಕರ ನಿರತ ನರ್ಸ್‌ಗಳ ವಿರುದ್ಧ ಆವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಹೇರಲು ಲೆಫ್ಟಿನೆಂಟ್ ಗವರ್ನರ್ ಅವರು ಅನುಮೋದನೆ ನೀಡಿದ್ದಾರೆಂದು ದಿಲ್ಲಿ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ಮಾ ಕಾಯ್ದೆಯು ಯಾವುದೇ ಮುಷ್ಕರವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಕ್ರಮವೆಂದು ಘೋಷಿಸಲು ಸರಕಾರಕ್ಕೆ ಅನುಮತಿ ನೀಡುತ್ತದೆ.
 ವೇತನ ಹಾಗೂ ಭತ್ತೆಗಳ ಏರಿಕೆಗೆ ಆಗ್ರಹಿಸಿ ದಿಲ್ಲಿ ಮತ್ತು ಕೇಂದ್ರ ಸರಕಾರಗಳು ನಡೆಸುತ್ತಿರುವ ವಿವಿಧ ಆಸ್ಪತ್ರೆಗಳ 20 ಸಾವಿರಕ್ಕೂ ಅಧಿಕ ನರ್ಸ್‌ಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News