ಮಂಡೇಲರ ಪ್ರಥಮ ಸಂದರ್ಶನದ ವೀಡಿಯೊ 60 ವರ್ಷಗಳ ನಂತರ ಪತ್ತೆ

Update: 2016-09-03 07:02 GMT

ಜೋಹಾನ್ಸ್‌ಬರ್ಗ್,ಆಗಸ್ಟ್ 3: ಆಫ್ರಿಕನ್ ವರ್ಣತಾರತಮ್ಯದ ವಿರೋಧಿ ಹೋರಾಟದ ನಾಯಕ ನೆಲ್ಸ್‌ನ್ ಮಂಡೇಲರ ಮೊದಲ ಸಂದರ್ಶನದ ವೀಡಿಯೊ ಅರುವತ್ತು ವರ್ಷಗಳ ಬಳಿಕ ಪತ್ತೆಯಾಗಿದೆ ಎಂದು ವರದಿಯಾಗಿದೆ.ನಾಲ್ಕೂವರೆ ವರ್ಷಗಳವರೆಗೆ ಕೋರ್ಟಿನಲ್ಲಿ ನಡೆದಿದ್ದ 1956ರಲ್ಲಿದೇಶದ್ರೋಹ ಪ್ರಕರಣದ ವಿಚಾರಣೆಯ ವೇಳೆ ಮುದ್ರಿಸಿದ್ದ 24 ಸೆಕೆಂಡ್‌ಗಳ ಸಂದರ್ಶನ ಪತ್ತೆಯಾಗಿದೆ ಎಂದು ನೆಲ್ಸನ್ ಮಂಡೇಲ ಫೌಂಡೇಶನ್‌ಗೆ ಸಂಬಂಧಿಸಿದವರು ತಿಳಿಸಿದ್ದಾರೆ.ನೆದರ್ಲೆಂಡ್ ಟಿವಿ ಪ್ರಸಾರಕ ಎವಿಆರ್‌ಒ 1961 ಜನವರಿ 31ಕ್ಕೆ ಪ್ರಸಾರ ಮಾಡಿದ್ದ ವೀಡಿಯೊ ಇದು. ವರ್ಣತಾರತಮ್ಯದ ಕುರಿತ’ಬೋಯರ್ಸ್‌ಆ್ಯಂಡ್ ಬಾಂಡುಸ್’ ಕಾರ್ಯಕ್ರಮದ ಭಾಗವಾಗಿ ಈ ಸಂದರ್ಶನ ಪ್ರಸಾರಿಸಲಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News