ಪುತ್ತೂರು: ಬಸ್ಸಿನಡಿಗೆ ಬಿದ್ದು ಮಹಿಳೆ ಗಂಭೀರ ಗಾಯ
ಪುತ್ತೂರು,ಸೆ.3 : ಕೆಎಸ್ಸಾರ್ಟಿಸಿ ಬಸ್ಸೇರಲೆಂದು ಹೋದ ವೃದ್ದ ಮಹಿಳೆಯೊಬ್ಬರು ಆಕಿಸ್ಮಿಕವಾಗಿ ಬಸ್ಸಿನಡಿಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶುಕ್ರವಾರ ಸಂಭವಿಸಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ನಿವಾಸಿ ದಿವಂಗತ ಇಬ್ರಾಹಿಂ ಎಂಬವರ ಪತ್ನಿ ಐಸಮ್ಮ(60) ಗಾಯಗೊಂಡವರು, ಬಸ್ಸಿನ ಚಕ್ರದಡಿಗೆ ಸಿಲುಕಿ ಕೈಯ ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ, ಗಾಯಾಳುವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ಳಿಚಡವು ಎಂಬಲ್ಲಿ ಒಬ್ಬಂಟಿಯಾಗಿ ವಾಸ್ತವ್ಯವಿರುವ ಐಸಮ್ಮ ಅವರು ಈಶ್ವರಮಂಗಲದ ಪುತ್ತೂರು ಪಳ್ಳತ್ತೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನೇರುತ್ತಿದ್ದ ಸಂದರ್ಭದಲ್ಲಿ ಬಸ್ಸಿನಡಿಗೆ ಬಿದ್ದು ಗಾಯಗೊಂಡರು ಎನ್ನಲಾಗಿದೆ. ಘಟನೆಯಲ್ಲಿ ಅವರ ಎರಡೂ ಕೈಗಳಿಗೆ ಗಾಯವಾಗಿದ್ದು, ಒಂದು ಕೈ ಸಂಪೂರ್ಣ ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.
ಪೊಲೀಸರು ಬಸ್ಸನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.