×
Ad

ಜಮಾತೆ ಇಸ್ಲಾಂ ಹಿಂದ್ ಸಂಘಟನೆಯಿಂದ ವಿಚಾರ ವಿನಿಮಯ ಕಾರ್ಯಕ್ರಮ

Update: 2016-09-03 19:16 IST

ಮಂಗಳೂರು, ಸೆ.3: ಜಮಾತೆ ಇಸ್ಲಾಂ ಹಿಂದ್ ಸಂಘಟನೆಯು ಶಾಂತಿ ಮತ್ತು ಸಮಾನತೆ ಎಂಬ ವಿಷಯದಲ್ಲಿ ರಾಷ್ಟ್ರ ವ್ಯಾಪಿ ಹಮ್ಮಿಕೊಂಡ ಅಭಿಯಾನ ಪ್ರಯುಕ್ತ ಉಪ್ಪಿನಂಗಡಿ ಜಮಾತೆ ಇಸ್ಲಾಂ ಹಿಂದ್ ಉಪ್ಪಿನಂಗಡಿ ಶಾಖೆಯು ಇತ್ತೀಚೆಗೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಾಗೂ ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್‌ನ ಊರ ಗಣ್ಯರೊಂದಿಗೆ ವಿಚಾರ ವಿನಿಮಯ ನಡೆಸಿತು.

 ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಎಂ.ಅಶ್ರಫ್ ಅವರು ಸಮಾಜದಲ್ಲಿ ಆಗುತ್ತಿರುವ ಕೋಮುಧ್ರುವೀಕರಣ , ಸಮಾಜದಲ್ಲಿ ತುಂಬಿರುವ ಅಶಾಂತಿ ಮತ್ತು ಅಸಮಾನತೆಯ ನ್ನು ಹೋಗಲಾಡಿಸಿ ಸಹಬಾಳ್ವೆ ಜೀವನ ನಡೆಸಬೇಕೆಂದು ಹೇಳಿದರು.

  ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜಮಾತೆ ಇಸ್ಲಾಂ ಹಿಂದ್‌ನ ಜಿಲ್ಲಾ ಸಂಚಾಲಕ ಇಲ್ಯಾಸ್ ಇಸ್ಮಾಯಿಲ್ ಹಾಗೂ ಸ್ಥಾನೀಯ ಅಧ್ಯಕ್ಷ ಯು.ಕೆ.ಇಲ್ಯಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News