×
Ad

ಬಂಟ್ವಾಳ: ಬಾರ್‌ಗೆ ಅನುಮತಿ ವಿರೋಧಿಸಿ ಮನವಿ

Update: 2016-09-03 19:53 IST

ಬಂಟ್ವಾಳ, ಸೆ. 3: ಇಲ್ಲಿನ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಂಜಾಲಕಟ್ಟೆಯ ಜನವಸತಿ ಪ್ರದೇಶದ ಬಳಿ ಬಾರ್ ನಿರ್ಮಿಸಲು ಪಂಚಾಯತ್ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಸ್ಥಳೀಯ ಕಟ್ಟಡವೊಂದರಲ್ಲಿ ವೈನ್‌ಶಾಪ್‌ವೊಂದು ಕಾರ್ಯನಿರ್ವಹಿಸುತ್ತಿದ್ದು ಅದರಿಂದಾಗಿ ಹಲವು ವರ್ಷಗಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದೀಗ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ, ಶಾಲೆ, ಮಸೀದಿ ಅಲ್ಲದೆ ಜನವಸತಿ ಪ್ರದೇಶವಿರುವ ಸ್ಥಳದಲ್ಲಿ ಬಾರ್ ತೆರಯುವ ಪ್ರಯತ್ನ ನಡೆಯುತ್ತಿದ್ದು ಇದರಿಂದಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ತೀರಾ ತೊಂದರೆ ಅನುಭವಿಸಬೇಕಾಗುತ್ತದೆ. ಸಾರ್ವಜನಿಕ ಶಾಂತಿ ಭಂಗ, ಗುಂಪು ಕಲಹಗಳು ನಡೆಯುವ ಸಾಧ್ಯತೆಯಿದ್ದು ಗ್ರಾಮದ ನೆಮ್ಮದಿ ಹಾಳುಮಾಡುವ ಹುನ್ನಾರ ಇದಾಗಿದೆ. ಆದ್ದರಿಂದ ಈ ಪ್ರಯತ್ನವನ್ನು ಮುಂದುವರಿಸದೆ ಕೂಡಲೇ ಕೈ ಬಿಡುವಂತೆ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News