ಬಂಟ್ವಾಳ : ಜುಗಾರಿ ಅಡ್ಡೆಗೆ ದಾಳಿ - 12 ಮಂದಿಯ ಬಂಧನ
Update: 2016-09-03 19:56 IST
ಬಂಟ್ವಾಳ, ಸೆ. 3: ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಶ್‌ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ನಿರತರಾಗಿದ್ದ 12 ಮಂದಿಯನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ 23,600 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಚಿತ್ತರಾಜ್, ರಾಜೇಶ್, ಇಬ್ರಾಹೀಂ, ಪುರುಷೋತ್ತಮ, ಕೋಟಿ ಪೂಜಾರಿ, ನಾಗೇಶ್ ಪೂಜಾರಿ, ಅಜಿತ್ ಪ್ರಸಾದ್, ರೋಹಿತ್ ಪೂಜಾರಿ, ಮುಹಮ್ಮದ್ ಅನ್ಸಾರ್, ಅಶೋಕ, ಪ್ರಸಾದ್, ಹಮೀದ್ ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಅವರ ನಿರ್ದೇಶನದಂತೆ ಸಿಐ ಮಂಜಯ್ಯ ಮಾರ್ಗದರ್ಶನದಲ್ಲಿ ಎಸೈ ನಂದಕುಮಾರ್, ಸಿಬ್ಬಂದಿಯಾದ ಸದಾಶಿವ ಶೆಟ್ಟಿ, ಉದಯಕುಮಾರ್, ರಾಜೇಶ್, ಅದ್ರಾಮ, ಸಂಪತ್ ದಾಳಿ ಕಾರ್ಯಚರಣೆ ನಡೆಸಿದ್ದಾರೆ.