ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಭಾಸ್ಕರ ಆಚಾರ್ಯ ಆಯ್ಕೆ
Update: 2016-09-03 20:52 IST
ಮೂಡುಬಿದಿರೆ,ಸೆ.3: ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಇದರ ಮಹಾಸಭೆಯಲ್ಲಿ ಮಂಗಳವಾರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಭಾಸ್ಕರ ಆಚಾರ್ಯ ಹೊಸಬೆಟ್ಟು ಆಯ್ಕೆಯಾಗಿದ್ದಾರೆ
ಇತರ ಪದಾಧಿಕಾರಿಗಳು:
ಕೆ.ಅಮರನಾಥ ಶೆಟ್ಟಿ (ಗೌರವಾಧ್ಯಕ್ಷ), ರಾಕೇಶ್ ಪಿ.ಕೋಟ್ಯಾನ್ ಅಲಂಗಾರ್ (ಕಾರ್ಯದರ್ಶಿ), ಕೆ.ಪ್ರದೀಪ್ ರೈ (ಸಂಚಾಲಕ), ಎಂ.ರಾಮಚಂದ್ರ ಭಟ್ (ಗೌರವ ಸಲಹೆಗಾರ), ಪ್ರಶಾಂತ್ ಅಂಚನ್ (ಕೋಶಾಧಿಕಾರಿ), ಸುರೇಶ್ ಕೋಟ್ಯಾನ್, ಸಂತೋಷ್ ಆರ್.ಶೆಟ್ಟಿ ಮಾರ್ನಾಡು, ಎಂ.ಕೆ.ಇಬ್ರಾಹಿಂ, ಅಜಯ್ ವಿದ್ಯಾಗಿರಿ (ಉಪಾಧ್ಯಕ್ಷರು), ಗಣೇಶ್ ದೇವಾಡಿಗ, ದಿನೇಶ್ ಪೂಜಾರಿ, ಮಜೀದ್ ಕೊಡಂಗಲ್ಲು, ಸಂತೋಷ್ ಬಾಕ್ಯರಕೋಡಿ, ಪ್ರಮೋದ್ ಒಂಟಿಕಟ್ಟೆ (ಜತೆ ಕಾರ್ಯದರ್ಶಿ) ಹಾಗೂ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.