×
Ad

‘ಲೋಪದೋಷಗಳಿಲ್ಲದೇ ಫಲಿತಾಂಶ ಪ್ರಕಟ’ : ಮಂಗಳೂರು ವಿವಿ ಹೇಳಿಕೆಗೆ ಪ್ರಾಂಶುಪಾಲರ ಸಂಘದ ಆಕ್ಷೇಪ

Update: 2016-09-03 22:37 IST

ಬ್ರಹ್ಮಾವರ, ಸೆ.3: ಮಂಗಳೂರು ವಿವಿ ಕಳೆದ ನವೆಂಬರ್ ಮತ್ತು ಮೇ ತಿಂಗಳಿನಲ್ಲಿ ನಡೆಸಿದ ಪರೀಕ್ಷಾ ಫಲಿತಾಂಶದ ಅಂಕಪಟ್ಟಿಯಲ್ಲಿ ಸಾಕಷ್ಟು ತಪ್ಪುಗ ಳಿದ್ದು, ಈ ಬಗ್ಗೆ ವಿವಿ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಭೆಯಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಯಿತು. ಬ್ರಹ್ಮಾವರ, ಸೆ.3: ಮಂಗಳೂರು ವಿವಿ ಕಳೆದ ನವೆಂಬರ್ ಮತ್ತು ಮೇ ತಿಂಗಳಿನಲ್ಲಿ ನಡೆಸಿದ ಪರೀಕ್ಷಾ ಫಲಿತಾಂಶದ ಅಂಕಪಟ್ಟಿಯಲ್ಲಿ ಸಾಕಷ್ಟು ತಪ್ಪುಗ ಳಿದ್ದು, ಈ ಬಗ್ಗೆ ವಿವಿ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸೆಯಲ್ಲಿಸಾಕಷ್ಟುಅಸಮಾನ ವ್ಯಕ್ತವಾಯಿತು. ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಫಲಿತಾಂಶ ಪ್ರಕಟಣೆಯ ಕುರಿತಂತೆ ವಿವಿ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು ಎಂದು ಸಂಘ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

   ಮಂಗಳೂರು ವಿವಿ 6ನೇ ಸೆಮಿಸ್ಟರ್‌ನ ಫಲಿತಾಂಶವನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ಅದರಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿವೆ. ವಿವಿ ತಮ್ಮ ಪ್ರಕಟಣೆಯಲ್ಲಿ ಯಾವುದೇ ಲೋಪದೋಷವಿಲ್ಲದ ಫಲಿತಾಂಶವನ್ನು ಪ್ರಕಟಿಸಿದ್ದೇವೆ ಎಂದು ಹೇಳಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಪ್ರಕಟಿತ ಫಲಿತಾಂಶದಲ್ಲಿ ಸಾಕಷ್ಟು ತಪ್ಪುಗಳಿವೆಯಲ್ಲದೇ ಕೆಲವು ವಿದ್ಯಾರ್ಥಿಗಳ ಫಲಿತಾಂಶ ವನ್ನು ತಡವಾಗಿ ಪ್ರಕಟಿಸಿದ್ದರಿಂದ ಉನ್ನತ ಶಿಕ್ಷಣದ ಅವಕಾಶದಿಂದ ಅವರು ವಂಚಿತರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ. ಮಂಗಳೂರು ವಿವಿ 6ನೇ ಸೆಮಿಸ್ಟರ್‌ನ ಫಲಿತಾಂಶವನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದು, ಅದರಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿವೆ. ವಿವಿ ತಮ್ಮ ಪ್ರಕಟಣೆಯಲ್ಲಿ ಯಾವುದೇ ಲೋಪದೋಷವಿಲ್ಲದ ಫಲಿತಾಂಶವನ್ನು ಪ್ರಕಟಿಸಿದ್ದೇವೆ ಎಂದು ಹೇಳಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಪ್ರಕಟಿತ ಫಲಿತಾಂಶದಲ್ಲಿ ಸಾಕಷ್ಟು ತಪ್ಪುಗಳಿವೆಯಲ್ಲದೇ ಕೆಲವು ವಿದ್ಯಾರ್ಥಿಗಳ ಫಲಿತಾಂಶ ವನ್ನು ತಡವಾಗಿ ಪ್ರಕಟಿಸಿದ್ದರಿಂದ ಉನ್ನತ ಶಿಕ್ಷಣದ ಅವಕಾಶದಿಂದ ಅವರು ವಂಚಿತರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ. 2015ರ ನವೆಂಬರ್‌ನಲ್ಲಿ ನಡೆದ 5ನೇ ಸೆಮಿಸ್ಟರ್‌ನ ಫಲಿತಾಂಶದಲ್ಲೂ ಗೊಂದಲವಿದ್ದು, ಅದು ಪೂರ್ಣವಾಗಿ ಇನ್ನೂ ಬಗೆಹರಿದಿಲ್ಲ. ಕೆಲವು ವಿದ್ಯಾರ್ಥಿ ಗಳ 5ನೇ ಸೆಮಿಸ್ಟರ್‌ನ ಅಂಕಪಟ್ಟಿ ಇನ್ನೂ ಬಂದಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪೂರ್ಣ ಅಂಕಗಳಿಗಿಂತ ಹೆಚ್ಚಿನ ಅಂಕಗಳು ದೊರಕಿವೆ. ಈ ವಿಷಯ ಗಳನ್ನು ವಿವಿ ಅಧಿಕಾರಿಗಳ ಗಮನಕ್ಕೆ ಪ್ರಾಂಶುಪಾಲರು ತಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳ ಮತ್ತು ಹೆತ್ತವರ ಅಸಮಾಧಾನಕ್ಕೆ ಪ್ರಾಂಶುಪಾಲರು ತುತ್ತಾಗುತ್ತಿದ್ದಾರೆ ಎಂದು ದೂರಲಾಗಿದೆ.

ದೂರು ಸ್ವೀಕರಿಸದ ಅಧಿಕಾರಿಗಳು:

ಉನ್ನತ ಶಿಕ್ಷಣದಿಂದ ವಂಚಿತ: ವಿವಿ ಪ್ರಾಂಶುಪಾಲರ್‌ಗೆ ಅಂತರ್ಜಾಲದಲ್ಲಿ ತೆಗೆದ ಅಂಕಪಟ್ಟಿಗೆ ದೃಢೀಕರಣ ಪತ್ರ ನೀಡಲು ಅನುಮತಿ ನೀಡಿದೆ. ಆದರೆ ತದನಂತರ ವಿವಿ ನೀಡಿದ ಅಂಕಪಟ್ಟಿಯ ಅಂಕಗಳು ಸಂಪೂರ್ಣ ಭಿನ್ನವಾಗಿ ದ್ದರಿಂದ ಹಲವಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮತ್ತು ಸೇರ್ಪಡೆಗೊಳ್ಳಲು ಗೊಂದಲವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಸಭೆಯಲ್ಲಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸಂಘದ ಕಾರ್ಯದರ್ಶಿ ಪ್ರೊ. ವೈ.ಭಾಸ್ಕರ ಶೆಟ್ಟಿ, ಪ್ರೊ. ಶಂಕರ, ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಂಗಾಧರ್, ಪ್ರೊ.ರಾಜನ್ ವಿ.ಎನ್, ಪ್ರೊ.ರವೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News