ಮುಲ್ಕಿ : ಮಖಾಶಿಫುಲ್ ಉಲೂಮ್ ಮದರಸ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮುಹಿಯುದ್ದೀನ್ ರಾಹಿಲ್ ಆಯ್ಕೆ
Update: 2016-09-03 22:47 IST
ಮುಲ್ಕಿ, ಸೆ.3: ಸಮಸ್ತ ಕೇರಳ ಸುನ್ನಿ ಬಾಲ ವೇದಿ ಇದರ ಕೊಲ್ನಾಡು ಮಖಾಶಿಫುಲ್ ಉಲೂಮ್ ಮದರಸ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಮುಹಿಯುದ್ದೀನ್ ರಾಹಿಲ್ ಆಯ್ಕೆಯಾಗಿದ್ದಾರೆ.
ಕೊಲ್ನಾಡು ಮಖಾಶಿಫುಲ್ ಉಲೂಮ್ ಮದರಸದಲ್ಲಿ ಎಸ್ಕೆಎಸ್ಸೆಸ್ಸೆಫ್‌ನ ದ.ಕ. ಜಿಲ್ಲಾಧ್ಯಕ್ಷರಾದ ಇಸ್ಹಾಕ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಸಲಾಹುದ್ದೀನ್ ಅನಸ್ ಯಾಸೀನ್, ಪ್ರಧಾನ ಕರ್ಯದರ್ಶಿಯಾಗಿ ಃಫೀಝ್, ಜೊತೆ ಕಾರ್ಯದರ್ಶಿಗಳಾಗಿ ಸರ್ಫರಾಝ್, ಯಾಸೀನ್, ಖಜಾಂಚಿಯಾಗಿ ಅಬ್ದುಲ್ ಹಮೀದ್ ಅವರನ್ನು ಆಯ್ಕೆ ಯಾಗಿದ್ದಾರೆ.
ಸಭೆಯನ್ನು ಕೊಲ್ನಾಡು ಮಖಾಶಿಫುಲ್ ಉಲೂಮ್ ಮದರಸದ ಸದರ್ ಮುಲ್ಲಿಂ ಉಮರ್ ಮುಸ್ಲಿಯಾರ್ ನೆರವೇರಿಸಿದರು. ಅಬ್ದುಲ್ ಅಝೀಝ್ ಝಹ್‌ರಿ, ಮುಹಮ್ಮದ್ ಮುಸ್ಲಿಯಾರ್ ವೇಣೂರು, ಮುಹಮ್ಮದ್ ಮುಸ್ಲಿಯಾರ್ ಕಾಜೂರು, ದಾವೂದ್ ಮುಸ್ಲಿಯಾರ್ ಮೊದಲಾಆದವರು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.