ಐಸಿವೈಎಂನ 10 ನೇ ರಾಷ್ಟ್ರೀಯ ಯುವ ಸಮಾವೇಶದ ಪ್ರಾರ್ಥನ ಕಾರ್ಡ್ ಬಿಡುಗಡೆ
Update: 2016-09-03 23:10 IST
ಮಂಗಳೂರು, ಸೆ. 3: ಐಸಿವೈಎಂನ 10 ನೇ ರಾಷ್ಟ್ರೀಯ ಯುವ ಸಮಾವೇಶದ ಪ್ರಾರ್ಥನ ಕಾರ್ಡನ್ನು ಬಿಷಪ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಅವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಸಂತ ಪದವಿಗೇರುತ್ತಿರುವ ಮದರ್ ತೆರೆಸಾ ಅವರ ಭಾವಚಿತ್ರಕ್ಕೆ ಅವರು ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಂ.ಪಿ.ನೊರ್ಹೋನಾ, ಅಶ್ವಿನಿ ಪಿರೇರ, ಆನ್ಸಿಟ, ರೊನಾಲ್ಡ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು