ಬೈಕ್-ರಿಕ್ಷಾ ಮಧ್ಯೆ ಅಪಘಾತ
Update: 2016-09-03 23:40 IST
ಕಟೀಲು, ಸೆ.3: ಬೈಕ್ ಮತ್ತು ಆಟೊ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಕಟೀಲು ದೇವಳದ ಬಳಿ ಶನಿವಾರ ಬೆಳಗ್ಗೆ ನಡೆದಿದೆ
ಕಟೀಲು ಬಸ್ಸ್ಟಾಂಡ್ನಿಂದ ಕಾಲೇಜ್ ಕಡೆಗೆ ಸಂಚರಿಸುತ್ತಿದ್ದ ಬೈಕ್ಗೆ ಅಜಾರು ಕಡೆಯಿಂದ ಪ್ರಯಣಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಅಪಘಾತದ ರಭಸಕ್ಕೆ ರಿಕ್ಷಾದ ಮುಂಭಾಗಕ್ಕೆ ಹಾನಿಯಾಗಿದೆ. ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.