ತಂಡದಿಂದ ಯುವಕನಿಗೆ ಹಲ್ಲೆ: ದೂರು
Update: 2016-09-03 23:41 IST
ಮೂಡುಬಿದಿರೆ, ಸೆ.3: ಇಲ್ಲಿನ ಸ್ವರಾಜ್ಯಮೈದಾನ ಬಳಿ ತಂಡವೊಂದು ಮೂಡು ಕೊಣಾಜೆಯ ನಿತಿನ್ ಪೂಜಾರಿ (31) ಎಂಬವರಿಗೆ ಹಲ್ಲೆ ನಡೆಸಿದೆ.
ಗಾಯಾಳು ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ದಯಾನಂದ ಆಚಾರ್ಯ, ರಮೇಶ್, ಅಶೋಕ್, ಪ್ರಜ್ವಲ್, ಸುಜಿತ್‌ಶೆಟ್ಟಿ ಹಾಗೂ ಇತರರು ಸೇರಿ ಶನಿವಾರ ಸಂಜೆ ನಿತಿನ್ ಪೂಜಾರಿ ಮೇಲೆ ವೈಯಕ್ತಿಕ ದ್ವೇಷದಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.