×
Ad

ದೇವಳದ ಕಾಣಿಕೆ ಡಬ್ಬಿ ಕಳವು

Update: 2016-09-03 23:43 IST

ಪುತ್ತೂರು, ಸೆ.3: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಮಹಾವಿಷ್ಣುಮೂರ್ತಿ ದೇವಾಲಯದಿಂದ ಕಾಣಿಕೆ ಡಬ್ಬಿ ಕಳವಾದ ಬಗ್ಗೆ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ. ದೇವಾಲಯದ ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಕಳವುಗೈದು ಬೀಗ ಮುರಿದು ಅದರಲ್ಲಿದ್ದ ಹಣವನ್ನು ದೋಚಿ ಖಾಲಿ ಕಾಣಿಕೆ ಡಬ್ಬಿಯನ್ನು ಪಕ್ಕದ ತೋಟಕ್ಕೆ ಎಸೆದು ಹೋಗಿರುವುದಾಗಿ ತಿಳಿದು ಬಂದಿದೆ. ಘಟನೆಯ ಕುರಿತು ದೇವಾಲಯದ ಆಡಳಿತಾಧಿಕಾರಿ ರಮೇಶ್ ಟಿ.ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News