ಅಪಘಾತದಲ್ಲಿ ಗಾಯಗೊಂಡಿದ್ದ ವೈದ್ಯ ಡಾ.ಕೇಶವ ಭಟ್ ಮೃತ್ಯು
Update: 2016-09-04 16:00 IST
ಕಾಸರಗೋಡು, ಸೆ.4: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮುಳ್ಳೇರಿಯದ ಹಿರಿಯ ವೈದ್ಯ ಡಾ.ವಿ.ಕೇಶವ ಭಟ್(87) ಇಂದು ಬೆಳಗ್ಗೆ ಮುಳ್ಳೇರಿಯಾದ ಗಾಡಿಗುಡ್ಡೆ ರಸ್ತೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಇತ್ತೀಚೆಗೆ ಕುಟುಂಬ ಸಮೇತ ಮಂಗಳೂರಿಗೆ ತೆರಳುತ್ತಿದ್ದಾಗ ಮಂಗಳೂರು ಬಳಿ ಇವರು ಸಂಚರಿಸುತ್ತಿದ್ದ ಕಾರಿಗೆ ಬೇರೊಂದು ಕಾರು ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಕೇಶವ ಭಟ್ ಎಂಟು ದಿನಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಸುಮಾರು 55 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ಕೇಶವ ಭಟ್ ಮುಳ್ಳೇರಿಯಾದ ಕೃಷ್ಣ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂನ ಸ್ಥಾಪಕರಾಗಿದ್ದಾರೆ. ಮುಳ್ಳೇರಿಯ ಎಯುಪಿ ಶಾಲೆಯ ಮ್ಯಾನೇಜರ್, ಮುಳ್ಳೇರಿಯ ಎಜ್ಯುಕೇಶನ್‌ಸೊಸೈಟಿಯ ಅಧ್ಯಕ್ಷರಾಗಿಯೂ ಕರ್ತವ್ಯನಿರ್ವಹಿಸಿದ್ದರು.