ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷರಾಗಿ ಮನ್ಸೂರು ರಕ್ಷಿದಿ ಆಯ್ಕೆ
Update: 2016-09-04 16:07 IST
ಉಳ್ಳಾಲ, ಸೆ.4: ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯ ಮಹಾಸಭೆ ಇತ್ತೀಚೆಗೆ ಕಲ್ಕಟ್ಟ ರಿಫಾಯಿಯ ಮದ್ರಸ ಹಾಲ್‌ನಲ್ಲಿ ನಡೆಯಿತು.
ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಇಝ್ಝುದ್ದೀನ್ ಅಹ್ಸನಿ ದುಆ ನೆರವೇರಿಸಿ ಸಭೆಗೆ ಚಾಲನೆ ನೀಡಿದರು.
ಈ ಸಂದರ್ಭ 2016-2017ನೆ ಸಾಲಿನ ನೂತನ ಸಮಿತಿಯನ್ನು ರಚಿಸಲಯಿತು. ಅಧ್ಯಕ್ಷರಾಗಿ ಮನ್ಸೂರು ರಕ್ಷಿದಿ, ಉಪಾಧ್ಯಕ್ಷರಾಗಿ ಎ.ಎಂ.ಕುಂಞಿಬಾವ ಹಾಜಿ ಕಲ್ಕಟ್ಟ, ಅಶ್ರಫ್ ಕಟ್ಟೆ, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಬಶೀರ್ ಕಲ್ಕಟ್ಟ, ಜೊತೆ ಕಾರ್ಯದರ್ಶಿಯಾಗಿ ಅಬ್ದುರ್ರಝಾಕ್ ಕೆ.ಐ., ಕೊಶಾಧಿಕಾರಿಯಾಗಿ ಅಬ್ದುಲ್ ನಾಸಿರ್, ಲೆಕ್ಕ ಪರಿಶೋಧಕರಾಗಿ ಪತ್ರಕರ್ತ ಬಶೀರ್ ಕಲ್ಕಟ್ಟ ಮತ್ತು 21 ಆಡಳಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ, ಮಾಜಿ ಉಪಾಧ್ಯಕ್ಷ ಮೊಯ್ದಿನ್ ಕುಂಞಿ ಹಾಜಿ, ಮಾಜಿ ಪ್ರ.ಕಾರ್ಯದರ್ಶಿ ಹಸೈನಾರ್, ಕಾರ್ಯದರ್ಶಿ ಕೆ.ಎಂ. ಮುಹಮ್ಮದ್, ಮಾಜಿ ಸದಸ್ಯ ಹಸನಬ್ಬ ಹಾಜಿ ಅಮ್ಮೆಂಬಳ ಉಪಸ್ಥಿತರಿದರು.