×
Ad

ಪರಿಸರ ಸ್ವಚ್ಚತೆಯೊಂದಿಗೆ ಖಾಳಜಿ ವಹಿಸಿದರೆ, ಸ್ವಚ್ಛ ಭಾರತದ ಶೇ. 90 ಪ್ರಗತಿ ಸಾಧ್ಯ: ಫಾ.ಆ್ಯಂಡ್ರೂ ಲಿಯೋ ಡಿಸೋಜ

Update: 2016-09-04 18:45 IST

ಮುಲ್ಕಿ, ಸೆ.4: ತಮ್ಮ ಮನೆ ಹಾಗೂ ಪರಿಸರ ಸ್ವಚ್ಚತೆಯೊಂದಿಗೆ ಖಾಳಜಿ ವಹಿಸಿದರೆ, ಸ್ವಚ್ಛ ಭಾರತದ ಶೇ. 90 ಪ್ರಗತಿ ಸಾಧ್ಯ ಎಂದು ಪಕ್ಷಿಕೆರೆ ಚರ್ಚು ಧರ್ಮಗುರುಗಳಾದ ಫಾ.ಆ್ಯಂಡ್ರೂ ಲಿಯೋ ಡಿಸೋಜ ಅಭಿಪ್ರಾಯಿಸಿದರು.

   ಕೆಮ್ರಾಲ್ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಮತ್ತು ಕೆಮ್ರಾಲ್ ಗ್ರಾಮ ಪಂಚಾಯತ್‌ಗಳ ಜಂಟಿ ಸಹಯೋಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಶನಿವಾರ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಗ್ರಾಮಗಳಲ್ಲಿನ ಸೇವಾ ಸಂಸ್ಥೆಗಳು ಸೇರಿಕೊಂಡು ಕಾರ್ಯ ತಂತ್ರಗಳನ್ನು ರೂಪಿಸಿಕೊಂಡು ಪ್ರಧಾನಿ ಮೋಡಿಯವರ ಕನಸು ನನಸಾಗಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.

 ಗ್ರಾಮಗಳಲ್ಲಿನ ಪ್ರಾರ್ಥನಾ ಕೇಂದ್ರಗಳಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಜಾಗ್ರತಿ ಕಾಯ್ಕ್ರಮಗಳನ್ನು ರೂಪಿಸಿದರೆ ಪರಿಣಾಮಕಾರಿಯಾಗಿ ವಿಲೇವಾರಿ ಸಾಧ್ಯ ಎಂದು ಗ್ರಾಮಸ್ಥ ಧನಂಜಯ ಶೆಟ್ಟಿಗಾರ್‌ಅಭಿಪ್ರಾಯ ವ್ಯಕ್ತ ಪಡಿಸಿದರು.

  ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ವಿನೋದ್ ಬೊಳ್ಳುರು, ತಾಪಂ ಸದಸ್ಯರಾದ ವಜ್ರಾಕ್ಷಿ ಶೆಟ್ಟಿ, ಜೀವನ್ ಪ್ರಕಾಶ್ , ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್, ಪಡುಪಂಬೂರು ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ಹಾಗೂ ಎರಡೂ ಗ್ರಾಮಗಳ ಸದಸ್ಯರು ಉಪಸ್ಥಿತರಿದ್ದರು.

 ಸ್ವಚ್ಛ ಭಾರತ ಮಿಷನ್‌ನ ಜಿಲ್ಲಾ ಸಂಯೋಜಕಿ ಮಂಜುಳಾ ಪ್ರಸ್ತಾವಿಸಿದರು. ಪಡುಪಣಂಬೂರು ಪಂಚಾಯತ್ ಪಿಡಿಒ ಅನಿತಾ ಕ್ಯಾಥರಿನ್ ಮತ್ತು ಕೆಮ್ರಾಲ್ ಪಂಚಾಯತ್ ಪಿಡಿಒರಮೇಶ್ ರಾಥೋಡ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News