ರೋಮ್‌ನಲ್ಲಿ ಮದರ್ ತೆರೇಸಾಗೆ ಸಂತ ಪದವಿ ಘೋಷಣೆ :ನಗರದಲ್ಲಿ ಸಂಭ್ರಮಾಚರಣೆ

Update: 2016-09-04 14:28 GMT

ಮಂಗಳೂರು,ಸೆ.4:ಜಗತ್ತಿನಾದ್ಯಂತ ದೀನರ ಮಾತೆಯೆಂದು ಕರೆಸಿಕೊಂಡಿದ್ದ ಮಾಹಾನ್ ಸಮಾಜ ಸೇವಕಿಯಾಗಿ ವಿಶ್ವದ ಜನತೆಯ ಪ್ರೀತಿಗೆ ಪಾತ್ರರಾಗಿದ್ದ ಮದರ್ ತೆರೇಸಾ ಅವರಿಗೆ ರೋಮ್‌ನ ವೆಟಿಕನ್ ನಗರದಲ್ಲಿ ನಡೆಯಲಿರುವ ಕಥೊಲಿಕ್ ಚರ್ಚ್‌ನ ಸಮಾರಂಭದಲ್ಲಿ ಸಂತ ಪದವಿಯ ಘೋಷಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಕಥೊಲಿಕ್ ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ಅತೀ. ವಂ.ಡಾ.ಅಲೊಶಿಯಸ್ ಪೌವ್ಲ್ ಡಿ ಸೋಜರವರ ನೇತೃತ್ವದಲ್ಲಿ ನಗರದ ಸ್ಟರಕ್ ರಸ್ತೆಯ ಸಿಸ್ಟರ ಚ್ಯಾರಿಟಿ ಹೋಂ ನಿಂದ ಮಿಲಾಗ್ರಿಸ್ ಚರ್ಚ್ ವರೆಗೆ ಮದರ್ ತೆರೇಸಾರ ಪ್ರತಿಮೆಯ ಮೆರವಣಿಗೆ ಹಾಗೂ ಚರ್ಚ್ ಸಭಾಂಗಣದಲ್ಲಿ ಸಂಭ್ರಮಾಚರಣೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಸೇವೆಗೆ ಮದರ್ ತೆರೆಸಾ ಮಾದರಿ: ಬಡವರ,ಶೋಷಿತರ,ಕಷ್ಟದಲ್ಲಿರುವವರನ್ನು ಪ್ರೀತಿಸಿ ಅವರ ಸೇವೆ ಮಾಡಲು ಮದರ್ ತೆರೇಸಾ ನಮಗೆಲ್ಲಾ ಮಾದರಿಯಾಗಿದ್ದಾರೆ ಮತ್ತು ಪ್ರೇರಣೆಯಾಗಿದ್ದಾರೆ.ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಬಿಷಪ್ ಕರೆ ನೀಡಿದರು.

            ಸಂಜೆ ನಗರದ ತೆರೇಸಾ ಕಾನ್ವೆಂಟ್‌ನಿಂದ ಫಳ್ನೀರ್ ರಸ್ತೆಯ ಮೂಲಕ ಮಿಲಾಗ್ರಿಸ್ ಚರ್ಚ್ ವರೆಗೆ ಬಿಷಪ್ ನೇತೃತ್ವದಲ್ಲಿ ನಡೆದ ಮೆರವಣೆಗೆಯಲ್ಲಿ ಹಾಗೂ ಬಳಿಕ ನಡೆದ ಸಮಾರಂಭದಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಪ್ರಧಾನ ಗುರುಗಳಾದ ವಂ.ಡೆನ್ನಿಸ್ ಮೊರಸ್ ಪ್ರಭು,ಮಿಲಾಗ್ರಿಸ್ ಚರ್ಚ್ ಧರ್ಮಗುರುಗಳಾದ ವಂ.ವೆಲೇರಿಯನ್,ಪಾಲ್ದಾನೆ ಚರ್ಚ್‌ನ ಧರ್ಮಗುರುಗಳಾದ ವಂ.ವಿನ್ಸೆಂಟ್ ಮಿನೇಜಸ್,ಮಿಲಾಗ್ರಿಸ್ ಚರ್ಚ್‌ನ ಉಪಾಧ್ಯಕ್ಷ ಐವನ್ ಡಿ ಸೋಜ,ಕಾರ್ಯದರ್ಶಿ ಸುನಿಲ್ ಮಸ್ಕರೇನಸ್,ಮದರ್ ತೆರೇಸಾ ಸಂತ ಪದವಿ ಸಂಭ್ರಮಾಚರಣೆಯ ಸಮಿತಿಯ ಸಂಚಾಲಕ ನೈಝಿಲ್ ಪಿರೇರಾ ,ಮದರ್ ತೆರೆಸಾ ಕಾನ್ವೆಂಟ್‌ನ ಸುಫೀರಿಯರ್ ಸಿಸ್ಟರ್ ಬೆನೆಡಿಕ್ಟ್ ಬರೆಟ್ಟೊ,ನಗರ ಚರ್ಚ್ ವಲಯದ ಮುಖ್ಯಸ್ಥ ವಂ.ಜೆ.ಬಿ.ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News