ಕಟೀಲು ನಿಂದನೆ: ಸೂಕ್ತ ಕ್ರಮ - ಸಚಿವ ಖಾದರ್
ಮಂಗಳೂರು, ಸೆ. 4: ಯಾವುದೇ ಧರ್ಮವನ್ನು, ದೇವರನ್ನು ನಿಂದಿಸುವುದು ಅಥವಾ ಅವಹೇಳನಗೈಯುವುದು ಸಹಿಸಲು ಸಾಧ್ಯವಿಲ್ಲ. ಅಂತಹ ಕಿಡಿಗೇಡಿಗಳ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಟೀಲು ದೇವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾದ ಹೇಳಿರುವುದು ಅಕ್ಷಮ್ಯ. ನೈಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಎಲ್ಲರೂ ಸಹಕರಿಸಬೇಕು. ಯಾವುದೇ ಧರ್ಮದವರು ಇತರ ಧರ್ಮವನ್ನು ನಿಂದಿಸುವುದನ್ನು ಸರಿಯಲ್ಲ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆ: ಸಚಿವರ ಶುಭಾಶಯ
ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಆಹಾರ ಸಚಿವ ಯು.ಟಿ.ಖಾದರ್ ಶುಭಾಶಯ ಕೋರಿದ್ದಾರೆ. ನಮ್ಮ ಬದುಕು ರೂಪಿಸಲು ತಂದೆ-ತಾಯಿ ಸಹಿತ ಶಿಕ್ಷಕರ ಪಾತ್ರವೂ ದೊಡ್ಡದು. ಭವಿಷ್ಯದ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಶ್ರಮ ಅಪಾರ. ಅವರ ಸೇವೆಯನ್ನು ಸ್ಮರಿಸುತ್ತಾ, ಶಿಕ್ಷಕ ವರ್ಗದ ಆಶೀರ್ವಾದವನ್ನು ಕೋರುವುದಾಗಿ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.