ಕೋಳಿ ಅಂಕ: ನಾಲ್ವರ ಸೆರೆ
Update: 2016-09-04 23:44 IST
ಕುಂದಾಪುರ, ಸೆ.4: ಕಾಳಾವರ ಅಭಿಮಾನ್ ಬಾರ್‌ನ ಹಿಂಭಾಗದ ಹಾಡಿಯಲ್ಲ್ಲಿ ಸೆ.3ರಂದು ಸಂಜೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಉಡುಪಿ ಡಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉದಯ ಮರಕಾಲ(38), ಶ್ರೀಧರ ಪೂಜಾರಿ(30), ವಿರೇಂದ್ರ ಭಂಡಾರಿ (34), ಅನಿಲ್ ಕುಮಾರ್(22) ಎಂದು ಗುರುತಿಸಲಾಗಿದೆ. ಇವರಿಂದ ಕುಂದಾಪುರ ಪೊಲೀಸರು 1,130 ರೂ. ನಗದು, 5 ಕೋಳಿಗಳು, 5 ಬಾಳುಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.