×
Ad

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ: ದೂರು

Update: 2016-09-04 23:48 IST

ಉಡುಪಿ, ಸೆ.4: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಪ್ರಾಧ್ಯಾಪಕಿ ಡಾ. ಮಮತಾ ಕೆ.ವಿ. ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಮಧೇಯ ವ್ಯಕ್ತಿಯೊಬ್ಬ ಜು.30ರಂದು ಮಮತಾ ಕುಮಾರಿ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿದ್ದು, ಖಾತೆಯ ಮುಖಚಿತ್ರವಾಗಿ ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಶಾಲೆಯಲ್ಲಿ ಇತ್ತೀಚೆಗೆ ಡಾ.ಮಮತಾ ಕೆ.ವಿ. ಭಾಷಣ ಮಾಡುತ್ತಿರುವಾಗ ಸಂಸ್ಥೆಯವರು ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಚಿತ್ರವನ್ನು ಬಳಸಿಕೊಳ್ಳಲಾಗಿದೆ.
 ಈ ಖಾತೆಯನ್ನು ಅಸಲಿ ಎಂದು ತಿಳಿದ ಸುಮಾರು 450ಕ್ಕೂ ಹೆಚ್ಚು ಇವರ ಸ್ನೇಹಿತರು, ಹಳೆವಿದ್ಯಾರ್ಥಿಗಳು, ರೋಗಿಗಳು ಅದರೊಂದಿಗೆ ಸಂಪರ್ಕದಲ್ಲಿದ್ದು ಹಲವು ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News