×
Ad

ಧಾರ್ಮಿಕ ಅವಹೇಳನಕ್ಕೆ ಖಂಡನೆ

Update: 2016-09-04 23:49 IST

ಮಂಗಳೂರು, ಸೆ.4: ಸಮಾಜದ ಸ್ವಾಸ್ಥವನ್ನು ಕೆಡಿಸುವ ದುರುದ್ದೇಶದಿಂದ ಬಂಟ್ವಾಳದ ವ್ಯಕ್ತಿಯೊಬ್ಬ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವುದನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.
ಯಾವನೇ ವ್ಯಕ್ತಿಯು ಇನ್ನೊಂದು ಧರ್ಮದ ಬಗ್ಗೆ ಕೀಳಾಗಿ ಪ್ರತಿಕ್ರಿಯಿಸುವುದು ಮತ್ತು ಇನ್ನೊಬ್ಬನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೆ ಸಮಾಜದ ಶಾಂತಿ ಹಾಗೂ ನೆಮ್ಮದಿಯನ್ನು ಕೆಡಿಸುತ್ತದೆ. ಇಂತಹ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಂಘದ ಮುಖಂಡರಾದ ಅಲಿ ಹಸನ್, ರೋಶನ್ ಪತ್ರಾವೊ, ವಸಂತ್ ಟೈಲರ್, ಪುರುಷೋತ್ತಮ, ಮುಹಮ್ಮದ್ ಸಾಲಿ, ಸತ್ತಾರ್‌ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News