ನಿಧನ
Update: 2016-09-04 23:56 IST
ಯು.ಜೆ.ಮುಹಮ್ಮದ್
ಉಡುಪಿ, ಸೆ.4: ಉದ್ಯಾವರ ಗುಡ್ಡೆಯಂಗಡಿ ನಿವಾಸಿ, ಉದ್ಯಮಿ ಯು.ಜೆ.ಮುಹಮ್ಮದ್(53) ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉಡುಪಿಯ ಯಾಸೀನ್ ಟ್ರೇಡರ್ಸ್‌ನ ಮಾಲಕರಾಗಿದ್ದ ಇವರು ಅಂಬಾಗಿಲು ಸಂತೋಷ್‌ನಗರದ ಬದ್ರಿಯಾ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಉಡುಪಿ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯರನ್ನು ಅಗಲಿದ್ದಾರೆ.