ಎನ್‌ಎಸ್‌ಜಿ: ಭಾರತಕ್ಕೆ ಆಸ್ಟ್ರೇಲಿಯ ಬೆಂಬಲ

Update: 2016-09-04 18:30 GMT

ಹಾಂಗ್‌ಝೌ,ಸೆ.4: ಪರಮಾಣು ಪೂರೈಕೆದಾರರ ಬಳಗ (ಎನ್‌ಎಸ್‌ಜಿ)ಕ್ಕೆ ಸೇರ್ಪಡೆಗೊಳ್ಳಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಆಸ್ಟ್ರೇಲಿಯದ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ರವಿವಾರ ಬೆಂಬಲ ಘೋಷಿಸಿದ್ದಾರೆ. ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೇಳೆ, ಈ ಭರವಸೆಯನ್ನು ನೀಡಿದ್ದಾರೆ.

ಎನ್‌ಎಸ್‌ಜಿ ಸದಸ್ಯತ್ವಕ್ಕೆ ಆಸ್ಟ್ರೇಲಿಯ ನೀಡಿರುವ ಸಕ್ರಿಯ ಬೆಂಬಲಕ್ಕೆ ಪ್ರಧಾನಿಯವರು ಟರ್ನ್ ಬುಲ್‌ಗೆ ಕೃತಜ್ಞತೆ ವ್ಯಕ್ತಪಡಿಸಿದರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಹಾಂಗ್‌ಝೌನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಜೂನ್‌ನಲ್ಲಿ ದಕ್ಷಿಣ ಕೊರಿಯದಲ್ಲಿ ನಡೆದ ಎನ್‌ಎಸ್‌ಜಿ ಸಮಾವೇಶದಲ್ಲಿ, ಸದಸ್ಯತ್ವ ಕೋರಿ ಭಾರತ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲ್ಪಟ್ಟಿತ್ತು. ಭಾರತವು ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿಹಾಕದಿರುವುದರಿಂದ ಅದರ ಸೇರ್ಪಡೆಯನ್ನು ಚೀನಾ ಮತ್ತಿತರ ರಾಷ್ಟ್ರಗಳು ವಿರೋಧಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News