×
Ad

ಹಿಲರಿ ಕ್ಲಿಂಟನ್ ಮುನ್ನಡೆ ಕುಸಿತ

Update: 2016-09-05 00:01 IST

ವಾಶಿಂಗ್ಟನ್,ಸೆ.4: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾ ಹಿಲರಿ ಕ್ಲಿಂಟನ್ ಜನಪ್ರಿಯತೆಯಲ್ಲಿ ತನ್ನ ಎದುರಾಳಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎದುರು ಹೊಂದಿದ್ದ ಮುನ್ನಡೆಯು ಕಳೆದೊಂದು ತಿಂಗಳಲ್ಲಿ ಅರ್ಧಾಂಶದಷ್ಟು ಕಡಿಮೆಯಾಗಿದೆಯೆಂದು ಇತ್ತೀಚಿನ ಸಮೀಕ್ಷೆಯೊಂದು ವರದಿ ಮಾಡಿದೆ.

ಆಗಸ್ಟ್ 9 ಹಾಗೂ 30ರ ನಡುವೆ ದೂರವಾಣಿ ಮೂಲಕ ಅಮೆರಿಕಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ ಹಿಲರಿಗೆ ಸರಾಸರಿ 42 ಶೇ. ಹಾಗೂ ಟ್ರಂಪ್ ಶೇ. 32ರಷ್ಟು ಮತದಾರರ ಬೆಂಬಲ ದೊರೆತಿದೆಯೆಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದಾಗ್ಯೂ ಹಿಲರಿ ಚುನಾವಣೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿ ದ್ದಾರೆಂದು ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News