ಕಾಸರಗೋಡು: 2 ಕಿಲೋ ಗಾಂಜ ಪತ್ತೆ - ಇಬ್ಬರ ಬಂಧನ
Update: 2016-09-05 16:28 IST
ಕಾಸರಗೋಡು,ಸೆ. 5: ಎರಡು ಕಿಲೋ ಗಾಂಜಾವನ್ನು ವಶಪಡಿಸಿಕೊಂಡಿರುವ ಕಾಸರಗೋಡು ಅಬಕಾರಿದಳದ ಸಿಬಂದಿಗಳು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ
ಬಂಧಿತರನ್ನು ಕಾಸರಗೋಡು ತಳಂಗರೆಯ ಆಟೋ ರಿಕ್ಷಾ ಚಾಲಕ ಅಬ್ದುಲ್ ಗಫೂರ್(36) ಮತ್ತು ತಾಯಲಂಗಾಡಿ ಯ ಅಬ್ದುಲ್ ಖಾದರ್(48) ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕರಂಡಕಾಡ್ ನಿಂದ ಆರೋಪಿಗಳನ್ನು ಬಂಧಿಸಿ ಗಾಂಜಾವನ್ನುವಶಪಡಿಸಿಕೊಳ್ಳಲಾಗಿದೆ .
ಅಬ್ದುಲ್ ಗಫೂರ್ ಗಾಂಜಾ ವನ್ನು ಅಬ್ದುಲ್ ಖಾದರ್‌ಗೆ ಹಸ್ತಾಂತರಿಸುತ್ತಿದ್ದ ಸಂದರ್ಭದಲ್ಲಿ ಅಬಕಾರಿ ದಳಕ್ಕೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ..
ಇಡುಕ್ಕಿಯಿಂದ ಶಾಜಿ ಎಂಬಾತ ಇದನ್ನು ಆರೋಪಿ ಅಬ್ದುಲ್ ಗಫೂರ್‌ಗೆ ನೀಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.