×
Ad

ಕಾಸರಗೋಡು: ಕೊಲೆ ಆರೋಪಿ ಬಂಧನ

Update: 2016-09-05 16:43 IST

ಕಾಸರಗೋಡು,ಸೆ. 5:  ಹಫ್ತಾ ಹಣಕ್ಕಾಗಿ ಕರ್ನಾಟಕ ಮೂಲದ ಕೂಲಿ ಕಾರ್ಮಿಕನನ್ನು ಕೊಲೆಗೈದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು  ನುಳ್ಳಿಪ್ಪಾಡಿ ಚೆನ್ನಿಕೆರೆಯ  ಮಣಿ (23) ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಘಟನೆ ನಡೆದಿತ್ತು. ಕೊಪ್ಪಳ ದ   ಶರಣಪ್ಪ ( 34) ಎಂಬವರನ್ನು ಹಫ್ತಾ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು.  ಹಲ್ಲೆ  ತಡೆದ ಸ್ನೇಹಿತ ಮಾರುತಿ ಮೇಲೂ ಹಲ್ಲೆ ನಡೆಸಿದ್ದನು.  ಗಂಭೀರ  ಗಾಯಗೊಂಡ  ಶರಣಪ್ಪ ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ  ಸ್ಪಂದಿಸದೇ  ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News