ಮೂಡುಬಿದಿರೆಯಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ

Update: 2016-09-05 11:41 GMT

ಮೂಡುಬಿದಿರೆ,ಸೆ.5 : ದ.ಕ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ ಜಿಲ್ಲಾಮಟ್ಟದ ಹಾಗೂ ಮೂಡುಬಿದಿರೆ ವಲಯ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಸೋಮವಾರ ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ನಡೆಯಿತು.

ದ.ಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಮಾರಂಭ ಉದ್ಘಾಟಿಸಿದರು. ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು.

ಜಿಲ್ಲಾ ಶಿಕ್ಷಕ ಪ್ರಶಸ್ತಿ:

 ಕುಂಞ ನಾಯಕ್ ಪೆರುವಾಯಿ, ಡಿ.ಧರ್ಣಪ್ಪ ಬೆಳ್ತಂಗಡಿ, ಜೋಯ್ಸ ಹೆನ್ರಿಟಾ ಮಣ್ಣಗುಡ್ಡೆ, ಪ್ರೆಸ್ಸಿ ಕುವೆಲ್ಲೊ

 ಯಮುನಾ ಕೆ., ನೀರ್ಕೆರೆ, ನಯನ ವಿ. ರೈ ತಿಂಗಳಾಡಿ, ಭವನಿ ಎ.ಜಿ, ಸುಳ್ಯ, ಯಕೂಬ್ ಎಸ್., ನಡ, ಲಕ್ಷ್ಮಣ್ ನಾಯ್ಕ, ಕೇಪು, ಮೋನಪ್ಪ, ಪಟ್ಟೆ ಪುತ್ತೂರು, ಜೋಸೆಪ್ ರಿಜಾರ್ಡ್ ಆಳ್ವರಿಸ್, ವಾಮಂಜೂರು, ರಮಾನಂದ ಸಿದ್ಧಕಟ್ಟೆ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಳೆದ ವರ್ಷ ರಾಜ್ಯ ಉತ್ತಮ ಶಿಕ್ಷಕ ಪಡೆದ ದೇವಪ್ಪ ನಾಯ್ಕಿ ಅವರನ್ನು ಸನ್ಮಾನಿಸಲಾಆಯಿತು.

ನಿವೃತ್ತ ವಿಷಯ ಪರಿವೀಕ್ಷಕರಾದ ಎಂ. ನರಸಿಂಹ ಭಟ್, ಎ.ಐ ಖಾಝಿ ಅವರನ್ನು ಗೌರವಿಸಲಾಯಿತು. ತಾರಸಿ ಕೃಷಿಯಲ್ಲಿ ಸಾಧನೆ ಮಾಡಿದ, ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಕಳೆದ ವರ್ಷ ನಿವೃತ್ತರಾದ ಶಿಕ್ಷಕರನ್ನು, ಕಳೆದ ವರ್ಷದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನೂರು ಶೇ. ಫಲಿತಾಂಶ ದಾಖಲಿಸಿದ ಮೂಡುಬಿದಿರೆ ವಲಯದ ಪ್ರೌಢ ಶಾಲೆಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಜಿಲ್ಲಾ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಪಂಚಾಯಿತಿ ಸಿಇಒ ಶ್ರೀವಿದ್ಯಾ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಅಮೀನ್, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮೂಡುಬಿದಿರೆ ತಹಸೀಲ್ದಾರ್ ಮುಹಮ್ಮದ್ ಇಸಾಕ್, ಮೂಡುಬಿದಿರೆಯ ಪ್ರಭಾರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ, ಉದ್ಯಮಿ ಶ್ರೀಪತಿ ಭಟ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ಭಟ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸ್ಟ್ಯಾನಿ ತಾವ್ರೋ, ಮೂಡುಬಿದಿರೆ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಕೆ.ಎಚ್ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ) ವಾಲ್ಟರ್ ಡಿ’ಮೆಲ್ಲೋ, ಡಯಟ್ ಉಪನಿರ್ದೇಶಕ(ಅಭಿವೃದ್ಧಿ) ಸಿಪ್ರಿಯನ್ ಮೊಂತೆರೋ, ಭಾರತ್ ಆಟೋ ಕಾರ್ಸ್‌ ಮಾರುತಿ ಸುಜುಕಿಯ ಪ್ರತಿನಿಧಿ ಸುಜ್ಞಾನ್ ವೇದಿಕೆಯಲ್ಲಿದ್ದರು. ಪುರುಷೋತ್ತಮ ರಾವ್ ವರದಿ ವಾಚಿಸಿದರು. ಶಾಮಂತ್ ಪಿ.ಎಂ, ರಾಧಕೃಷ್ಣ ಸನ್ಮಾನಿತರ ಪರಿಚಯ ಮಾಡಿದರು. ನವೀನ್ ಅಂಬೂರಿ, ರಾಮಕೃಷ್ಣ ಶಿರೂರು ಸ್ಪರ್ಧಾ ವಿಚೇತರ ವಿವರ ನೀಡಿದರು.

ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಕೆ.ಶ್ರೀಪತಿ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News