×
Ad

ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಸಮಾವೇಶದ

Update: 2016-09-05 17:27 IST

ಕಾಸರಗೋಡು,ಸೆ. 5: ಕೇರಳದ ಕೋಯಿಕ್ಕೋಡ್ ನಲ್ಲಿ  ಸೆಪ್ಟ೦ಬರ್ 23 ರಿಂದ 25 ರ ತನಕ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶದ ಪ್ರಚಾರಾರ್ಥವಾಗಿ  ಕಾಸರಗೋಡು ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ನಡೆಯುವ  ಸಂಪರ್ಕ ಅಭಿಯಾನಕ್ಕೆ ಸೋಮವಾರ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು.

ಮಂಗಳೂರು ಸಂಸದ  ನಳಿನ್ ಕುಮಾರ್ ಕಟೀಲು ರವರು ಡಾ . ಸುರೇಶ್  ಬಾಬು ರವರಿಗೆ ಆಮಂತ್ರಣ ಪತ್ರ ನೀಡುವುದರೊಂದಿಗೆ  ಅಭಿಯಾನಕ್ಕೆ ಚಾಲನೆ  ನೀಡಿದರು.

ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ , ಮುಖಂಡರಾದ ಪಿ . ರಮೇಶ್ , ಕೆ . ವೇಲಾಯುಧನ್ , ಎಂ . ಸಂಜೀವ ಶೆಟ್ಟಿ , ಪ್ರಮೀಳಾ ಸಿ. ನಾಯಕ್ , ರಾಮಪ್ಪ ಮಂಜೇಶ್ವರ  ಮೊದಲಾದವರು ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News