18 ತಿಂಗಳಲ್ಲಿ ಟೀ, ತಿಂಡಿಗೆ ಆಮ್ ಆದ್ಮಿಯ ಕೋಟಿ ಖರ್ಚು ಮಾಡಿದ ಸರಕಾರ !

Update: 2016-09-05 13:12 GMT

ಹೊಸದಿಲ್ಲಿ, ಸೆ. 5 : ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗು ಅವರ ಕೇವಲ 6 ಮಂದಿಯ ಸಂಪುಟ ಕಳೆದ 18 ತಿಂಗಳಲ್ಲಿ ತಮ್ಮ ಕಚೇರಿ ಹಾಗು ಅಧಿಕೃತ ನಿವಾಸಗಳಲ್ಲಿ ಅತಿಥಿಗಳಿಗೆ ಟೀ , ಕಾಫಿ, ತಿಂಡಿಗಾಗಿ ಖರ್ಚು ಮಾಡಿದ್ದು ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ವಿವೇಕ್ ಗಾರ್ಗ್ ಎಂಬವರು ಸಲ್ಲಿಸಿದ ಆರ್ ಟಿ ಐ ಅರ್ಜಿ ಮೂಲಕ ಈ ವಿಷಯ ಬಹಿರಂಗವಾಗಿದೆ. 

ಅರವಿಂದ್ ಕೇಜ್ರಿವಾಲ್ : ಮುಖ್ಯಮಂತ್ರಿಯ ಕಚೇರಿಯ ಬಿಲ್ 22,42,320 ರೂ. ಆಗಿದ್ದರೆ , ಅವರ ಗೃಹ ಕಚೇರಿಯ ಬಿಲ್ 24,86,921 ರೂ. ಆಗಿದೆ. 

ಡಿಸಿಎಂ ಮನೀಶ್ ಸಿಸೋಡಿಯಾ : ಗೃಹ ಕಚೇರಿಗೆ 5,66,304 ರೂಪಾಯಿ ಬಿಲ್ ಬಂದಿದ್ದರೆ ಕಚೇರಿಯ ಬಿಲ್ 5,62,125 ರೂ. ಒಟ್ಟು ಮೊತ್ತ 11,28,429 ರೂಪಾಯಿ. 

ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ :  ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಂಡ ಗೋಪಾಲ್ , ಕಚೇರಿಯಲ್ಲಿ 5,44,856 ರೂಪಾಯಿ ಖರ್ಚು ಮಾಡಿದ್ದರೆ ಗೃಹ ಕಚೇರಿಯಲ್ಲಿ  5,61,416 ರೂಪಾಯಿ ಖರ್ಚು ಮಾಡಿದ್ದಾರೆ. ಒಟ್ಟು 11 ಲಕ್ಷಕ್ಕೂ ಹೆಚ್ಚು ಖರ್ಚು. 

ಮಾಜಿ ಸಮಾಜ ಕಲ್ಯಾಣ ಸಚಿವ ಸಂದೀಪ್ ಕುಮಾರ್ : ಅಶ್ಲೀಲ ಸಿಡಿ ವಿಷಯದಲ್ಲಿ ವಜಾಗೊಂಡ ಸಂದೀಪ್ ಅವರ ಕಚೇರಿ ಬಿಲ್ 4,97,346  ರೂ. ಗೃಹ ಕಚೇರಿ ಬಿಲ್ 4,13,833 ರೂ. 

ಆರೋಗ್ಯ ಸಚಿವ ಸತ್ಯೇನ್ದ್ರ ಜೈನ್ : ಇವರ ಗೃಹ ಕಚೇರಿ ಬಿಲ್ 3,57,303 ರೂ. ಪೈಲಟ್ ವಾಹನದ ಖರ್ಚು 5,53,008  ರೂ. ಒಟ್ಟು ಖರ್ಚು ಒಂಬತ್ತು ಲಕ್ಷಕ್ಕೂ ಹೆಚ್ಚು. 

ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ : ಇವರ ಗೃಹ ಕಚೇರಿ ಬಿಲ್ ಕೇವಲ 36,232 ರೂ. ಆದರೆ ಕಚೇರಿ ಬಿಲ್ 5.9 ಲಕ್ಷ ರೂ. 

ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಇಮ್ರಾನ್ ಹುಸೇನ್ : ಎಲ್ಲರಿಗಿಂತ ಕಡಿಮೆ ಖರ್ಚು ಇವರದ್ದು. ಗೃಹ ಕಚೇರಿಯಲ್ಲಿ  1,67,933 ರೂ. ಬಿಲ್ ಬಂದಿದ್ದರೆ, 4,21,188  ರೂ. ಬಿಲ್ ಕಚೇರಿಗೆ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News