ಸೀತಾಂಗೋಳಿ: ಬೈಕ್‌ಗೆ ಟಿಪ್ಪರ್ ಢಿಕ್ಕಿ; ಶಿಕ್ಷಕ ಸ್ಥಳದಲ್ಲೇ ಮೃತ್ಯು
Update: 2016-09-06 10:37 IST
ಕಾಸರಗೋಡು, ಸೆ.6: ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಶಿಕ್ಷಕರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೀತಾಂಗೋಳಿ ಮುಖಾರಿಕಂಡದಲ್ಲಿ ಸಂಭವಿಸಿದೆ.
ಮೃತರನ್ನು ಕುಂಟಾರು ನಿವಾಸಿ, ಪುತ್ತಿಗೆ ಮುಹಿಮ್ಮತ್ ಶಾಲೆಯ ಅಧ್ಯಾಪಕ ಉಬೈದ್ (30) ಎಂದು ಗುರುತಿಸಲಾಗಿದೆ.
ಉಬೈದ್ ಅವರು ಬೆಳಗ್ಗೆ ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಪೆರ್ಲದ ಕಡೆಯಿಂದ ಸೀತಾಂಗೋಳಿಗೆ ತೆರಳುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಉಬೈದ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.