×
Ad

ಬಸ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಲಾರಿ: ಲಾರಿ ಚಾಲಕ ಗಂಭೀರ

Update: 2016-09-06 13:00 IST

ಮುಲ್ಕಿ, ಸೆ.6: ಪ್ರಯಾಣಿಕರನ್ನು ಇಳಿಸಲೆಂದು ನಿಂತಿದ್ದ ಬಸ್‌ಗೆ ಲಾರಿಯೊಂದು ಹಿಂದಿನಿಂದ ಢಿಕ್ಕಿಯಾದ ಘಟನೆ ಮುಕ್ಕ ಬಳಿಯ ಪಡ್ರೆ ದ್ವಾರದ ಬಳಿ ಸಂಭವಿಸಿದೆ.

ಘಟನೆಯ ಪರಿಣಾಮ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಸ್‌ನಲ್ಲಿದ್ದ ಓರ್ವ ಬಾಲಕಿ ಕೂಡಾ ಗಾಯಗೊಂಡಿದ್ದಾಳೆ. ಗಂಭೀರವಾಗಿ ಗಾಯಗೊಂಡ ಲಾರಿ ಚಾಲಕನನ್ನು ಸುಂದರ್ ಮತ್ತು ಬಸ್‌ನಲ್ಲಿದ್ದ ಬಾಲಕಿಯನ್ನು ಶ್ರಾವ್ಯ(15) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಚಾಲಕ ಮುಕ್ಕದ ಪಡ್ರೆ ದ್ವಾರದ ಬಳಿ ಪ್ರಯಾಣಿಕರನ್ನು ಇಳಿಸಲೆಂದು ರಸ್ತೆ ಮಧ್ಯೆ ಏಕಾಏಕಿ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಲಾರಿಯು ನಿಯಂತ್ರಣ ಕಳೆದುಕೊಂಡು ಬಸ್‌ನ ಹಿಂಭಾಗಕ್ಕೆ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್‌ನ ಹಿಂಭಾಗಕ್ಕೂ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News