ನಾಲಗೆ ಕಚ್ಚಿಕೊಂಡ ಫಿಲಿಪ್ಪೀನ್ಸ್ ಅಧ್ಯಕ್ಷ
Update: 2016-09-06 13:34 IST
ವೆಂಟಿಯಾನೆ, ಸೆ.6: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಸಾರ್ವಜನಿಕವಾಗಿ 'ಸೂ.... ಮಗ 'ಎಂದು ಸಾರ್ವಜನಿಕವಾಗಿ ನಿಂದಿಸಿದ್ದ ಫಿಲಿಪ್ಪೀನ್ಸ್ ನೂತನ ಅಧ್ಯಕ್ಷ ರೋಡ್ರಿಗೋ ಡುಟಾರ್ಟೆ ಮಂಗಳವಾರ ಕ್ಷಮೆ ಯಾಚಿಸಿದ್ದಾರೆ.
ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ದುಟಾರ್ಟೆ ಅವರೊಂದಿಗೆ ನಡೆಯಬೇಕಿದ್ದ ಸಭೆಯನ್ನು ಒಬಾಮಾ ರದ್ಧುಪಡಿಸಿದ್ದರು.
ಇದೀಗ ತನ್ನಿಂದ ಆಗಿರುವ ತಪ್ಪನ್ನು ಒಪ್ಪಿಕೊಂಡಿರುವ ದುಟಾರ್ಟೆ ತಾನು ಅಮೆರಿಕದ ಅಧ್ಯಕ್ಷರನ್ನು ನಿಂದಿಸಿದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ.