×
Ad

ಅಣ್ಣನ 18 ದಿನಗಳ ಶಿಶುವನ್ನು ಮೂರನೆ ಮಹಡಿಯಿಂದ ಕೆಳಗೆಸೆದ ಸಹೋದರಿ

Update: 2016-09-06 16:31 IST

ಕಾನ್‌ಪುರ್,ಸೆ.6:ಆಸ್ಪತ್ರೆಯ ಎರಡನೆ ಮಹಡಿಯಿಂದ ಸಹೋದರನ ಹದಿನೆಂಟು ದಿನಗಳ ಗಂಡು ಮಗುವನ್ನು ಸಹೋದರಿಯೇ ಕೆಳಗೆಸೆದು ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ಮಹಿಳೆ ಮಗುವನ್ನು ಎಸೆಯುವ ದೃಶ್ಯ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಈಗ ವೆಂಟಿಲೇಟರ್‌ನಲ್ಲಿರಿಸಲಾಗಿದೆ. ಸಹೋದರನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು ಮಹಿಳೆಯ ಅಸೂಯೆಗೆ ಕಾರಣವಾಗಿತ್ತು ಎನ್ನಲಾಗಿದೆ.

 ಮಗುಕಾಣೆಯಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಕಬ್ಬಿಣದ ಬಲೆಯಲ್ಲಿ ಮಗು ಸಿಕ್ಕಿ ಹಾಕಿಕೊಂಡಿರುವುದು ಆಸ್ಪತ್ರೆಯ ಸಿಬ್ಬಂದಿಗಳು ಮೊದಲು ನೋಡಿದ್ದಾರೆ. ಆ ನಂತರ ಮಗುವನ್ನು ಅಲ್ಲಿಂದೆತ್ತಿ ತಂದು ಈಗ ಚಿಕಿತ್ಸೆ ನೀಡಲಾಗುತ್ತಿದೆ. ಕಾಲಿಗೆ ಮುರಿತ ಆಗಿದ್ದನ್ನು ಬಿಟ್ಟರೆ ಶಿಶುವಿಗೆ ಗಂಭೀರ ಗಾಯಗಳೇನು ಆಗಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮಗುವನ್ನು ಯಾರೋ ಎತ್ತಿಬಿಸಾಡಿರಬೇಕೆಂದು ಮನಗಂಡ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ತಪಾಸಿಸಿದಾಗ ಮಹಿಳೆ ಮಗುವನ್ನು ಬಿಸಾಡುತ್ತಿರುವುದು ಕಂಡು ಬಂದಿತ್ತು. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News