ಆಳ್ವಾಸ್‌ಗೆ ಮಹೇಂದ್ರನ್ ಸ್ಮಾರಕ ಬಾಲ್‌ಬ್ಯಾಡ್ಮಿಂಟನ್ ಪ್ರಶಸ್ತಿ
Update: 2016-09-06 17:33 IST
ಮೂಡುಬಿದಿರೆ, ಸೆ.6: ತಮಿಳುನಾಡಿನ ಜೋಲಾರ್‌ಪೇಟೆಯಲ್ಲಿ ಮುಕ್ತಾಯಗೊಂಡ ಮಹೇಂದ್ರನ್ ಸ್ಮಾರಕ ಅಖಿಲ ಭಾರತ ಆಹ್ವಾನಿತ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಪಡೆದುಕೊಂಡಿದೆ.
ತಮಿಳುನಾಡಿನ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಸೂಪರ್ ಲೀಗ್ ಪಂದ್ಯಗಳಲ್ಲಿ ಪಾವೈ ನಾಮಕ್ಕಲ್ ವಿರುದ್ಧ 35-32, 35-27, ಲೇಡಿ ಶಿವಸ್ವಾಮಿ, ಮೈಲಾಪುರ ವಿರುದ್ಧ 35-19, 35-20 ಹಾಗೂ ಚೆನ್ನೈನ ಎಸ್.ಆರ್.ಎಂ.ವಿಶ್ವವಿದ್ಯಾನಿಲಯದ ವಿರುದ್ಧ 35-31, 35-27 ನೇರ ಸೆಟ್‌ಗಳ ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.