ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ : ದ.ಕ ಜಿಲ್ಲೆಗೆ ಸಮಗ್ರ ಪ್ರಶಸ್ತಿ
ಮೂಡುಬಿದಿರೆ, ಸೆ.6: ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ದ.ಕ.ಜಿಲ್ಲೆಯ ತಂಡವು ಒಟ್ಟು 320 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಉಡುಪಿ ಜಿಲ್ಲೆಯ ತಂಡ 210 ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ಜಿಲ್ಲೆಯ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರೆಡ್ ಕ್ಯಾಮೆಲ್ ಸ್ಕೂಲ್ ಮಂಗಳೂರು ಇವರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ದ.ಕ.ಜಿಲ್ಲೆಯ ಭಾಗವಹಿಸಿದ ತಂಡಗಳಾದ ಅಲ್‌ಪುರ್ಖಾನ್ ಸ್ಕೂಲ್, ಕಡಲಕೆರೆ ಮೂಡುಬಿದಿರೆ ರಾಜ್ಯಮಟ್ಟದ ತೃತೀಯ ಸ್ಥಾನವನ್ನು ಪಡೆಯಿತು.
ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್, ಅಡ್ಯಾರ್‌ನ ಪೀಸ್ ಪಬ್ಲಿಕ್ ಸ್ಕೂಲ್, ಯೆನೆಪೊಯ ಸ್ಕೂಲ್ ಮಂಗಳೂರು ಇವರು ದ.ಕ.ಜಿಲ್ಲೆಯ ಉತ್ತಮ ತಂಡ ಎಂಬ ಪ್ರಶಸ್ತಿ ಪಡೆದವು.
ಚಂದ್ರಶೇಖರ್ ದೀಕ್ಷಿತ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶೋರಿನ್ ರಿಯೂ ಕರಾಟೆಯ ಮುಖ್ಯ ಶಿಕ್ಷಕ ಹಾಗೂ ದ.ಕ.ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಕಾರ್ಯದರ್ಶಿ ನದೀಮ್, ಎಂ.ಕೆ.ಅನಂತರಾಜ್ ಕಾಲೇಜಿನ ಪ್ರಾಂಶುಪಾಲ ಧನಂಜಯ ಕುಮಾರ್, ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಮಹಾವೀರ ಕಾಲೇಜಿನ ದೈಹಿಕ ನಿರ್ದೇಶಕ ರಾಜ್‌ಪ್ರಸಾದ್, ಶೊರಿನ್ ರಿಯೂ ಕರಾಟೆ ಅಸೋಸಿಯೇಷನ್‌ನ ಸರ್ಪರಾಝ್, ರಾಜೇಶ್ ಉಪಸ್ಥಿತರಿದ್ದರು.
ನವೀನ್ ಅಂಬೂರಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.