ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಮೋಂಟುಗೋಳಿ ಆಯ್ಕೆ

Update: 2016-09-06 12:40 GMT

ಮಂಗಳೂರು, ಸೆ.6: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್)ನ ಅಖಿಲ ಭಾರತ ಘಟಕದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಆಯ್ಕೆಯಾಗಿದ್ದಾರೆ.

ದಿಲ್ಲಿಯಲ್ಲಿ ನಡೆದ ಸಂಘಟನೆಯ ವಿಶೇಷ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಮೌಲಾನ ಶೌಖತ್ ಅಲಿ ನಯೀಮಿ ಕಾಶ್ಮೀರ್, ಉಪಾಧ್ಯಕ್ಷರಾಗಿ ಸಾಲಿಕ್ ಅಹ್ಮದ್ ಲತೀಫಿ ಅಸ್ಸಾಂ, ಸಹ ಕಾರ್ಯದರ್ಶಿಯಾಗಿ ಕೆ.ಎಂ. ಅಬ್ದುಲ್ ಕಲಾಂ ಕೇರಳ ಹಾಗೂ ಕೋಶಾಧಿಕಾರಿಯಾಗಿ ಝುಹೈರುದ್ದೀನ್ ಕೋಲ್ಕತ್ತಾ ಪುನರಾಯ್ಕೆಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಸಿದ್ದೀಕ್ ಮೋಂಟುಗೋಳಿಯವರು, ರಾಷ್ಟ್ರೀಯ ಸಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ದೇಶದ ಇಪ್ಪತ್ತು ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳ ಸಮಾವೇಶವನ್ನು ಕೇರಳ ಪೌರಾಡಳಿತ ಸಚಿವ ಡಾ.ಕೆ.ಟಿ. ಜಲೀಲ್ ಉದ್ಘಾಟಿಸಿದರು. ಇದರ ಅಂಗವಾಗಿ ವಿವಿಧ ಗೋಷ್ಠಿಗಳು ನಡೆದಿದ್ದು, 2017ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಎಸ್ಸೆಸ್ಸೆಫ್‌ನ ಬೃಹತ್ ರಾಷ್ಟ್ರೀಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಯಿತು.

ಕರ್ನಾಟಕದಿಂದ ಎಸ್ಸೆಸ್ಸೆಫ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಶಾಫಿ ಸಅದಿ ಬೆಂಗಳೂರು ಹಾಗೂ ರಾಷ್ಟ್ರೀಯ ಯೋಜನಾ ಸಮಿತಿಗೆ ಎಮ್ಮೆಸ್ಸೆಂ ಝೈನಿ ಕಾಮಿಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಶೌಖತ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಸಾಲಿತ್ ಅಹ್ಮದ್ ಲತೀಫ್ ಅಸ್ಸಾಂ ಸ್ವಾಗತಿಸಿ, ಸಾಜಿದ್ ಕಾಶ್ಮೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News