×
Ad

ಮೈರ: ರಸ್ತೆಗೆ ಉರುಳಿದ ಮರ

Update: 2016-09-06 18:34 IST

ಬಂಟ್ವಾಳ, ಸೆ. 6: ಕಲ್ಲಡ್ಕ-ಕಾಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಮೈರ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಹಳೆ ಗೋಳಿ ಮರಯೊಂದು ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ತೊಡಕುಂಟಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಹಳೆ ಕಾಲದ ಮರವಾಗಿದ್ದರಿಂದ ಗಾಳಿ ಮಳೆಗೆ ಶಿಥಿಲಗೊಂಡಿತ್ತು. ಈ ಮರದ ಕೆಳಗೆ ಪ್ರಯಾಣಿಕರು ಬಸ್ ಕಾಯುತ್ತಾ ನಿಲ್ಲುತ್ತಿದ್ದರು. ಆದರೆ ಮರ ಉರುಳಿ ಬಿದ್ದ ಸಂದರ್ದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಬಾರೀ ಅಪಾಯೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಿಂದ ಕಾಸರಗೋಡು-ವಿಟ್ಲ ರಸ್ತೆಯಲ್ಲಿ ಕೆಲಹೊತ್ತು ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಮರವನ್ನು ತೆರವುಗೊಳಿಸಿದರು. ಶಿಥಿಲಗೊಂಡಿದ್ದ ಈ ಮರವನ್ನು ತೆರವುಗೊಳಿಸುವಂತೆ ಈ ಹಿಂದೆ ಕೇಪು ಗ್ರಾಮ ಪಂಚಾಯತ್ ಅರಣ್ಯ ಇಲಾಖೆಗೆ ಪತ್ರ ಬರೆದಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News