ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಸೆ. 6: ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ 2016-17ನೆ ಸಾಲಿನ ಮಹಾಸಭೆಯು ಎಸ್‌ಕೆಐಎಂವಿಬಿ ಮುಪತ್ತಿಷ್ ಕಾಸಿಂ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಅಗ್ರಾರ್ ಹಯಾತುಲ್ ಇಸ್ಲಾಮ್ ಮದ್ರಸದಲ್ಲಿ ನಡೆಯಿತು.
ಸಭೆಯಲ್ಲಿ 2016-17ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿ.ವೈ.ಅಬ್ದುರ್ರಝಾಕ್ ವೌಲವಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹನೀಫ್ ಪೈಝಿ ಬಂಟ್ವಾಳ ಮತ್ತು ಅಯ್ಯೂಬ್ ವೌಲವಿ, ಪ್ರಧಾನ ಕಾರ್ಯದರ್ಶಿಯಾಗಿ ಯಹ್ಯಾ ವೌಲವಿ, ಜೊತೆ ಕಾರ್ಯದರ್ಶಿಯಾಗಿ ಹಂಝ ವೌಲವಿ, ಹಮೀದ್ ದಾರಿಮಿ, ಬಂಟ್ವಾಳ ಪರೀಕ್ಷಾ ಬೋರ್ಡ್ ಚೇರ್‌ಮೇನ್ ಆಗಿ ಸಿದ್ದೀಕ್ ರಹ್ಮಾನ್, ವೈಸ್ ಚೇರ್‌ಮೇನ್ ಆಗಿ ಅನ್ವರ್ ವೌಲವಿ, ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿಯಾಗಿ ಮುಹಮ್ಮದ್ ಹಾಜಿ ಆಯ್ಕೆಯಾದರು.
ಗೇರುಕಟ್ಟೆ ಅಬ್ದುರ್ರಝಾಕ್ ವೌಲವಿ ಕಿರಾಅತ್ ಪಠಿಸಿದರು. ಅಬ್ದುಲ್ ಹಮೀದ್ ದಾರಿಮಿ ಸ್ವಾಗತಿಸಿದರು. ಅಸ್ಗರ್ ಅಲಿ ಪೈಝಿ ಸಭೆಯನ್ನು ಉದ್ಘಾಟಿಸಿದರು. ನೂತನ ಕಾರ್ಯದರ್ಶಿ ಯಹ್ಯಾ ವೌಲವಿ ವಂದಿಸಿದರು.