ಮುಸ್ಲಿಮರ ಹೋಟೆಲುಗಳಿಂದ ಬಿರಿಯಾನಿ ಸಂಗ್ರಹಿಸಲಿರುವ ಹರ್ಯಾಣ ಸರಕಾರ !

Update: 2016-09-06 16:28 GMT

ಚಂಡೀಗಢ, ಸೆ. 6 : ಮುಸ್ಲಿಮರು ಹೆಚ್ಚಿರುವ ಪ್ರದೇಶಗಳ ಹೊಟೇಲುಗಳಿಂದ ಬಿರಿಯಾನಿ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಅದರಲ್ಲಿ ಗೋಮಾಂಸ ಇದೆಯೇ ಎಂದು ಪರೀಕ್ಷಿಸಲಾಗುವುದು ಎಂದು ಮಂಗಳವಾರ ಹರ್ಯಾಣದ ಬಿಜೆಪಿ ಸರಕಾರ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಹರ್ಯಾಣದ ಗೋಸೇವಾ ಆಯೋಗದ ಅಧ್ಯಕ್ಷ  ಭಣಿರಾಮ್ ಮಂಗ್ಲ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.  ಈ ಸಂದರ್ಭದಲ್ಲಿ ಗೋ ಸಂರಕ್ಷಣಾ ಕಾರ್ಯ ಪಡೆಯ ಮುಖ್ಯಸ್ಥೆ ಐಪಿಎಸ್ ಅಧಿಕಾರಿ ಭಾರತಿ ಅರೋರಾ ಉಪಸ್ಥಿತರಿದ್ದರು. ಗ್ರಾಮಗಳ ಹೋಟೆಲ್ ಗಳಿಂದ ಬಿರಿಯಾನಿ ಸ್ಯಾಂಪಲ್ ಸಂಗ್ರಹಿಸಿ ಅದನ್ನು ಪರೀಕ್ಷೆಗೆ ಕಳಿಸಲು ಪೊಲೀಸರಿಗೆ ಮಂಗ್ಲ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News