×
Ad

ದ್ವಿಚಕ್ರ ವಾಹನ ಚೋರರಿಬ್ಬರ ಬಂಧನ

Update: 2016-09-06 22:02 IST

ಮಂಗಳೂರು, ಸೆ. 6: ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಪ್ಪಳದ ಹಿರೇಸಿಂದೋಗಿಯ ಮಂಜುನಾಥ (26) ಮತ್ತು ಕುಡುಪು ಬಾರ್‌ವೊಂದರ ಬಳಿಯ ನಿವಾಸಿ ಹರೀಶ್ ಪೂಜಾರಿ (24) ಎಂದು ಗುರುತಿಸಲಾಗಿದೆ.

ಆರೋಪಿಗಳು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವುಗೈದಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತಿನ ವೌಲ್ಯ 90 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಉತ್ತರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಶಾಂತರಾಮ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮದನ್ ಎಂ.ಸಿ. ಹಾಗೂ ಸಿಬ್ಬಂದಿಯಾದ ದಯಾನಂದ, ಪದ್ಮನಾಭ, ಜಯರಾಮ ಮತ್ತು ಗೋವರ್ಧನ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News