×
Ad

ಪತ್ರಕರ್ತ, ಕ್ಯಾಮರಾಮನ್ ಮೇಲೆ ಹಲ್ಲೆ: ಆರೋಪ

Update: 2016-09-06 22:51 IST

ಮಂಗಳೂರು, ಸೆ. 6: ವ್ಯಕ್ತಿಯೊಬ್ಬರಿಗೆ ಬಹಿಷ್ಕಾರ ಹಾಕಿದ್ದಾರೆಂಬ ಆರೋಪದ ಮೇಲೆ ವರದಿ ಮಾಡಲು ತೆರಳಿದ್ದ ವರದಿಗಾರರು ಮತ್ತು ಕ್ಯಾಮರಾಮೆನ್‌ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಭರತ್, ಇರ್ಷಾದ್ ಉಪ್ಪಿನಂಗಡಿ, ನಾಗೇಶ್ ಪಡು, ವಿಲ್ಫ್ರೆಡ್ ಡಿಸೋಜ ಹಲ್ಲೆಗೊಳಗಾದ ಪತ್ರಕರ್ತರು.

ಸೂರಲ್ಪಾಡಿ ಮಸೀದಿ ಅಧೀನದ ಮದ್ರದಿಂದ ಅದೇ ಜಮಾಅತ್‌ಗೊಳಪಟ್ಟ ನಾಗರಿಕರೊಬ್ಬರನ್ನು ಮದ್ರಸದಿಂದ ಬಹಿಷ್ಕಾರ ಹಾಕಲಾಗಿದೆ ಎಂಬ ಸುದ್ದಿ ಸೋಮವಾರದಿಂದಲೇ ಹರಡಿತ್ತು. ಈ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದಾಗಿ ಪತ್ರಕರ್ತರೊಬ್ಬರ ಮೊಬೈಲ್, ಛಾಯಾಚಿತ್ರಗ್ರಾಹಕರೊಬ್ಬರ ಕ್ಯಾಮೆರಾಕ್ಕೆ ಹಾನಿಗೊಳಿಸಲಾಗಿದೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.

ಈ ಸಂಬಂಧ ಇಂದು ಪತ್ರಕರ್ತರ ನಿಯೋಗವೊಂದು ಡಿಸಿಪಿ ಶಾಂತರಾಜು ಅವರನ್ನು ಭೇಟಿ ಮನವಿ ಸಲ್ಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News